ಅಂಕೋಲಾ: ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕೋಟೆವಾಡದ ವಿ.ಟಿ.ರಸ್ತೆ ನಿವಾಸಿ ಗಣಪತಿ ನೂನಾ ನಾಯ್ಕ (75) ಮೃತ ದುರ್ದೈವಿಯಾಗಿದ್ದು, ಈತ ತನ್ನ ಆತ್ಮೀಯ ವಲಯದಲ್ಲಿ ಹುಲಿ ಗಣಪತಿ ಎಂದೇ ಪರಿಚಿತನಾಗಿದ್ದ ಎನ್ನಲಾಗಿದೆ. ಈತನಿಗೆ ಕಳೆದ ಆರು ತಿಂಗಳ ಹಿಂದಷ್ಟೇ ಪತ್ನಿ ವಿಯೋಗದಿಂದಾಗಿ ಮತ್ತು ಇಳಿ ವಯಸ್ಸಿನಲ್ಲಿ ಕಾಡುತ್ತಿರುವ ನಾನಾ ಖಾಯಿಲೆಯಿಂದ ಮಾನಸಿಕವಾಗಿ ನೊಂದು, ಈತ ಮನೆಯ ಅಡುಗೆ ಕೋಣೆಯಲ್ಲಿ ಮೇಲ್ಬಾವಣಿಯ ಪೈಪಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ.

RELATED ARTICLES  ಭಾರತೀಯ ವಾಯು ಪಡೆ(ಐಎಎಫ್) ಚೀನಾಗಿಂತಲೂ ಬಲಿಷ್ಠ.

ಪಿ ಎಸೈ ಉದ್ದಪ್ಪ ಎ.ಡಿ ಮತ್ತು ಪೊಲೀಸ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಾಲೂಕಾಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಮತ್ತು ಸ್ಥಳೀಯರು, ಮೃತನ ಮಗ ರಮೇಶ ಹಾಗೂ ಗೆಳೆಯರು ಸಹಕರಿಸಿದರು. ಆತ್ಮಹತ್ಯೆಯ ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಲೈಫ್ ಗಾರ್ಡ್ಗಳ ಜೊತೆ ಪ್ರವಾಸಿಗರ ಅನುಚಿತ ವರ್ತನೆ..!