ಹೊನ್ನಾವರ: ತಾಲೂಕಿನ ಕಾಸರಕೋಡ್ ಇಕೋ ಬೀಚ್ ಕ್ರಾಸ್ ಫಾರೆಸ್ಟ್ ನರ್ಸರಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಜೂಗಾರಾಟ ನಡೆಸುತ್ತಿದ್ದ ವೇಳೆ ಹೊನ್ನಾವರ ಪೊಲೀಸರು ದಾಳಿ ನಡೆಸಿ 6 ಆರೋಪಿಗಳನ್ನು ಬಂಧಿಸಿದ್ದು,ಇರ್ವರು ಪರಾರಿಯಾದ ಘಟನೆ ನಡೆದಿದೆ.

ಪಿಎಸೈ ಮಹಾಂತೇಶ್ ಅವರ ನೇತ್ರತ್ವದಲ್ಲಿ ಈ ದಾಳಿ ನಡೆದಿದ್ದು, ಟೊಂಕಾ ಕಾಸರಕೋಡ ನಿವಾಸಿಗಳಾದ ಮಹಮ್ಮದ ಜಿಲಾನಿ ಸುಲೇಮಾನ ಮುನ್ನಾ,ಬಸೀರ್ ಅಹ್ಮದ ಹಬ್ಬಿ, ಅನ್ವರ್ ಅಬ್ದುಲ್ ಕರೀಮ್ ಬೊಂಬೈಕರ, ಹನೀಫ್ ಅಬ್ದುಲ್ ಕರೀಮ್ ಬೊಂಬೈಕರ, ಹಬಿವುಲ್ಲಾ ಉಮರಜಿ ಬಾಬು,ಕಾಸರಕೋಡ ರಾಮನಗರ ನಿವಾಸಿ ಮಹ್ಮದ ಹನೀಫ್ ಉಮರ್ ಬಾಪುಸಾಬ ದಾಳಿ ವೇಳೆ ಬಂಧಿತ ಆರೋಪಿತರಾಗಿದ್ದಾರೆ ಎನ್ನಲಾಗಿದೆ.

RELATED ARTICLES  ಪ್ರವಾಸಕ್ಕೆ ಬಂದವರು ನೀರುಪಾಲು : ಕುಮಟಾದ ಬಾಡ ಸಮುದ್ರ ತೀರದಲ್ಲಿ ದುರ್ಘಟನೆ

ಟೊಂಕಾ- ಕಾಸರಕೋಡ ನಿವಾಸಿಗಳಾದ ಸಲಾವುದ್ದೀನ್ ಜಿಕ್ರಿಯಾ ಬುರ್ಜಿ, ಸಮೀರ ಗನಿ ಬುಡ್ಡೆ ದಾಳಿ ವೇಳೆ ಓಡಿಹೋದ ಆರೋಪಿತರಾಗಿದ್ದಾರೆ. ಈ ಕುರಿತಾಗಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಪ್ರವಾಸಕ್ಕೆ ಬಂದಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಂಗಾವಳಿ ನದಿಯಲ್ಲಿ ಕಣ್ಮರೆ..!