ಕಾರವಾರ:- ತಾನು ಪ್ರೀತಿಸಿದ ಯುವತಿ ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಮನನೊಂದ ಯುವಕನೊಬ್ಬ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಅರಬ್ಬಿ
ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದ ಲೈಫ್ ಗಾರ್ಡ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
ವೆಸ್ಟ್ ಬೆಂಗಾಲ್ ಮೂಲದ ಕಾರ್ಮಿಕ ಮುಫ್ಲಾ ಮಂಡಲ್ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು ವೆಸ್ಟ್ ಬೆಂಗಾಳದಿಂದ ಕಾರವಾರದ ವೈದ್ಯಕೀಯ ಕಾಲೇಜಿನ
ಎರಡನೇ ಹಂತದ ಕಟ್ಟಡ ಕಾಮಗಾರಿ ಕೆಲಸಕ್ಕೆ ಆಗಮಿಸಿದ್ದ ಮುಫ್ಲಾ ಮಂಡಲ್ ಗೆ ವೆಸ್ಟ್ ಬೆಂಗಲ್ ನಲ್ಲಿ ಇದ್ದ ತನ್ನ ಪ್ರೇಯಸಿ ಬೇರೊಬ್ಬನ ಜೊತೆ ಮದುವೆಯಾಗಿರುವುದು ತಿಳಿದಿದೆ. ಇದನ್ನು ಸಹಿಸದೇ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ ಎನ್ನಲಾಗಿದೆ.
ಈ ಘಟನೆಗರ ಸಂಬಂಧಿಸಿದಂತೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.