ಭಟ್ಕಳ: ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ಹಿಂದೂಗಳ ದಮನಕ್ಕೆ ರಾಜ್ಯ ಸರ್ಕಾರ ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದು ಸುಖಾ ಸುಮ್ಮನೆ ಮುಖಂಡರ ಮೇಲೆ 395 ಕಲಂ ಪ್ರಕರಣ ದಾಖಲಿಸಿ ಜಾಮೀನು ದೊರಕದಂತೆ ಮಾಡಿದೆ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರದಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪುರಸಭೆ ಅಂಗಡಿ ತೆರವು ಪ್ರಕರಣ ನಂತರ ನಡೆದ ಘಟನೆಗಳಿಗೆ ಪುರಸಭೆಯೆ ನೇರ ಕಾರಣ. ಅಧಿಕಾರಿಗಳ ಇಚ್ಚಾಶಕ್ತಿಕೊರತೆಯಿಂದ ಇಂದಿನ ಪರಿಸ್ಥಿತಿ ಉದ್ಭವವಾಗಿದೆ. ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಇದನ್ನು ಸಕಾಲಕ್ಕೆ ಪರಿಹರಿಸಲು ಪ್ರಯತ್ನಿಸಬೇಕಿತ್ತು. ಈ ವಿಷಯವನ್ನು ಬೆಳಗಾವಿಯಲ್ಲಿ ನಡೆಯುವ ಅಧೀವೇಶನದಲ್ಲಿ ಪ್ರಸ್ಥಾಪಿಸಲಾಗುವದು. ಮುಂದಿನ ಬಾರಿ ನಮ್ಮ ಸರ್ಕಾರವೆ ಅಸ್ಥಿತ್ವಕ್ಕೆ ಬರಲಿದ್ದು ಇಂದಿನ ಘಟನೆಗಳಿಗೆ ಕಾರಣವಾದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದ ರಸ್ತೆಗಳು ಹೊಂಡಗಳಿಂದ ಕೂಡಿದ್ದು ಸಂಚರಿಸಲು ಸಾದ್ಯವಾಗುತ್ತಿಲ್ಲ. ಪಿಡಬ್ಲೂಡಿ ಬಳಿ ಹಣ ಇದ್ದರೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿಲ್ಲ. ಅ.2ರಂದು ಅನುಷ್ಠಾನಕ್ಕೆ ತಂದ ಮಾತೃಪೂರ್ಣ ಯೋಜನೆಯಂತು ಬಾನಂತಿಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ಪೌಷಿಕ ಆಹಾರ ಸೇವಿಸಲು ಗರ್ಭೀಣಿಯರು, ಬಾಣಂತಿಯರು ಮೈಲು ದೂರವಿರುವ ಅಂಗನವಾಡಿಗೆ ತೆರಳುವದು ಕಷ್ಟಕರ. ಅಲ್ಲದೇ ಹಲವಾರು ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಅಂತಹುದರಲ್ಲಿ ಅಡುಗೆ ಮಾಡುವದು ದೂರದ ಮಾತು. ಒಟ್ಟಾರೆಯಾಗಿ ವಿವೇಚನ ರಹಿತ ಸರ್ಕಾರ ಜನಸಾಮಾನ್ಯರನ್ನು ಲೂಟಿ ಮಾಡುತ್ತಾ ಬ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ಅಧಿಕಾರಗಳ ಮೇಲೆ ಹತೋಟಿ ಇಲ್ಲದೇ ಬೇಕಾಬಿಟ್ಟಿ ವರ್ತಿಸುತ್ತಿದೆ ಎಂದು ಸರ್ಕಾರವನ್ನು ದೂರಿದರು.

RELATED ARTICLES  ಕುಮಟಾ ಠಾಣೆ ಪಿ.ಎಸ್.ಐ. ಶ್ರೀ ಆನಂದಮೂರ್ತಿ ಮತ್ತು‌ ತಂಡವನ್ನು ಶ್ಲಾಘಿಸಿದ ಎಸ್.ಪಿ

ಈ ಸಂಧರ್ಭದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಬಿಜೆಪಿ ಜಿಲ್ಲಾದ್ಯಕ್ಷ ಕೆ.ಜೆ. ನಾಯ್ಕ, ಭಟ್ಕಳ ಮಂಡಲಾಧ್ಯಕ್ಷ ರಾಜೇಶ ನಾಯ್ಕ, ಮಾಜಿ ಮಂಡಲಾಧ್ಯಕ್ಷ ಈಶ್ವರ ನಾಯ್ಕ ದೊಡ್ಮನೆ, ವೆಂಕಟೇಶ ನಾಯ್ಕ ಸೇರಿದಂತೆ ಇತರರು ಇದ್ದರು.

RELATED ARTICLES  ಹಿಂದುತ್ವಕ್ಕಾಗಿ ಬಲಿದಾನಗೈದವರಿಗೆ ನ್ಯಾಯ ಒದಗಿಸಲು ಮಂಗಳೂರು ಚಲೋ ಜನ ಸುರಕ್ಷ ಯಾತ್ರೆ ; ಪ್ರಮೋದ ಹೆಗಡೆ