ಹೊನ್ನಾವರ : ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಮಟಾ ಶಾಸಕರಾದ ದಿನಕರ ಶೆಟ್ಟಿಯವರು ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಪಟ್ಟಣದಲ್ಲಿ ನಡೆದ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಮಾವೇಶ ಮುಗಿಸಿ ವಾಪಸ್ ಬರುತ್ತಿರುವ ಸಮಯದಲ್ಲಿ ಪೊಲೀಸ್ ಠಾಣೆಯ ಹತ್ತಿರ ಗೇರುಸೊಪ್ಪಾ ಸರ್ಕಲ್ ಸಮೀಪ ಬಳಕೂರು ಭಾಗದಿಂದ ಮರಳು ತುಂಬಿಕೊಂಡು, ಕುಮಟಾ ಮಾರ್ಗಕ್ಕೆ ಹೋಗುತ್ತಿದ್ದ ಮರಳು ತುಂಬಿದ ವಾಹನವನ್ನು ಶಾಸಕ ದಿನಕರ ಶೆಟ್ಟಿಯವರು ತಡೆದು ನಿಲ್ಲಿಸಿ, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳನ್ನು ಕರೆದು ಮರಳು ತುಂಬಿದ ವಾಹನವನ್ನು ಪೊಲೀಸ್ ವಶಕ್ಕೆ ನೀಡಿದ ಘಟನೆ ಸಂಭವಿಸಿದೆ.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್ : ಚಾಲಕ ಸ್ಥಳದಲ್ಲಿಯೇ ಸಾವು.

ತಾಲೂಕಿನ ಶರಾವತಿ ನದಿಯಿಂದ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ, ಆಗಾಗ ಸುದ್ದಿ ಆಗುತ್ತಲೇ ಇದೆ. ಮೊದಲು ರಾತ್ರಿ ಸಮಯದಲ್ಲಿ ಮಾತ್ರ ಮರಳು ಸಾಗಾಟ ನಡೆಯುತ್ತಿದ್ದು, ಆದರೆ ಇದೀಗ ಹಗಲು ರಾತ್ರಿ ಎನ್ನದೇ ಸಾಗುತ್ತಿತ್ತು. ಹಲವು ಇಲಾಖೆಯ ಅಧಿಕಾರಿಗಳು ನಿಯಂತ್ರಿಸುವ ಅವಕಾಶವಿದ್ದರೂ, ಕಳೆದ ಮೂರು ವರ್ಷದಿಂದ ರಾಜಕೀಯ
ನಾಯಕರು, ಅಧಿಕಾರಿಗಳ ಬೆಂಬಲದಿಂದ ಅನುಮತಿ ಇಲ್ಲದಿದ್ದರೂ ನಿರಂತರವಾಗಿ ನಡೆಯುತ್ತಿತ್ತು . ಇದೀಗ ಶಾಸಕರೇ ಮರಳು ಗಾಡಿ ತಡೆದು ನಿಲ್ಲಿಸಿದ್ದು, ತಾಲೂಕಿನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

RELATED ARTICLES  ಕುಮಟಾ ಹೆಗಡೆಯಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾಯ್ತು ಮನೆ!