ಭಟ್ಕಳ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ದೋಚಿ ಪರಾರಿಯಾದ ಘಟನೆ
ನಡೆದಿದೆ. ಪಟ್ಟಣದ ಪ್ರತಿಷ್ಟಿತ ರಿಸ್ಕೋ ಸಂಸ್ಥೆಯ ಮಾಲೀಕ ಎಸ್ ಎ. ರೆಹಮಾನ್ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದೆ.

ಇವರು ರಾಜ್ಯದಾದ್ಯಂತ ಹಲವು ಕಡೆಗಳಲ್ಲಿ ಸಂಸ್ಥೆಯ ಬ್ರಾಂಚ್‌ಗಳನ್ನು ಹೊಂದಿದ್ದು ತಿಂಗಳಲ್ಲಿ 15 ದಿನ ಹೊರಗಡೆ ಇರುತ್ತಾರೆ. ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಅವರ ಮನೆಯ ಕಾರು ಚಾಲಕ ಮನೆಯನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

RELATED ARTICLES  ಏಡ್ಸ್ ನಿರ್ಮೂಲನಾ ದಿನಾಚರಣೆ

ಮನೆಯಲ್ಲಿ ಅಂದಾಜು 7 ಲಕ್ಷದಷ್ಟು ಭಾರತೀಯ ಕರೆನ್ಸಿ, ಲಕ್ಷಾಂತರ ರೂ ಮೌಲ್ಯದ ವಿದೇಶ ಕರೆನ್ಸಿ, 110 ಗ್ರಾಂ ಚಿನ್ನವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಿಪಿಐ ಚಂದನ ಗೋಪಾಲ, ಪಿ.ಎಸ್.ಐ ಶ್ರೀಧರ ನಾಯ್ಕ ವಿಧಿವಿಜ್ಞಾನ ಪ್ರಯೋಗಾಲದ ಸಿ ಆಫ್ ಕ್ರೈಂ ಅಧಿಕಾರಿ ವಿನಿತಾ, ಬೆರಳಚ್ಚು ತಜ್ಞರು ಮುಂತಾದವರು ಉಪಸ್ಥಿತಿ ಇದ್ದರು. ಈ ಪ್ರಕರಣದ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಡಾ. ಸುಬ್ರಾಯ ಹೆಗಡೆಗೆಯವರಿಗೆ Global Visionary Award