ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., (ಟಿಆರ್ಸಿ) ಶಿರಸಿ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಂಸ್ಥೆಯ ಹಾಲಿ ಅಧ್ಯಕ್ಷ ಹಿರಿಯ ಸಹಕಾರಿ ರಾಮಕೃಷ್ಣ ಹೆಗಡೆ ಕಡವೆ ಬಳಗಕ್ಕೆ ಮತದಾರರು ಪ್ರಚಂಡ ಬಹುಮತ ನೀಡಿ ಗೆಲುವನ್ನು ದಾಖಲಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಗರಿಷ್ಟ ಮತ ಪಡೆದು ಆಯ್ಕೆಯಾದವರ ಪಟ್ಟಿ ಹೀಗಿದೆ.
ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಗಣಪತಿ ಶೇಷಗಿರಿ ರಾಯ್ಸದ್, ರಮಾಕಾಂತ ವೆಂಕಟ್ರಮಣ ಹೆಗಡೆ ಚಿಪಗಿ, ವಿಘ್ನೇಶ್ವರ ರಾಮಚಂದ್ರ ಹೆಗಡೆ ಅಗಸಾಲ ಕಿಬ್ಬಳ್ಳಿ, ವಿಶ್ವನಾಥ ಗೋಪಾಲಕೃಷ್ಣ ಹೆಗಡೆ ಸೋಮ್ನಳ್ಳಿ, ವಿಶ್ವಾಸ ಪುಂಡಲೀಕ ಬಲ್ಸೆ ಚವತ್ತಿ, ಶಿವಾನಂದ ಗಣಪತಿ ಭಟ್ಟ ನಿಡಗೋಡ, ಸುಬ್ರಾಯ ನಾರಾಯಣ ಹೆಗಡೆ ಹಾವಳಿಮನೆ‌ ವಿಜಯದ ನಗೆ ಬೀರಿದ್ದಾರೆ.

RELATED ARTICLES  ಕರೋನಾ ವೈರಸ್ ಹಾಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆಯ ಕುರಿತಾಗಿ ಜಾಗೃತಿ ಕಾರ್ಯಕ್ರಮ

ಹಿಂದುಳಿದ ‘ಬ’ ವರ್ಗದಿಂದ ರಾಮಕೃಷ್ಣ ಹೆಗಡೆ ಕಡವೆ ಬಳಗದಿಂದ ಸ್ಪರ್ಧಿಸಿದ್ದ ಸಂತೋಷಕುಮಾರ ಚಾಮರಾಜ ಗೌಡರ ತೋಟದ ಕಸಗೆ ಗೆಲುವನ್ನು ಕಂಡಿದ್ದಾರೆ. ಒಟ್ಟೂ 2087 ಅರ್ಹ ಶೇರು ಮತದಾರರಲ್ಲಿ 1,702 ಶೇರುದಾರರು ಮತವನ್ನು ಚಲಾಯಿಸಿದ್ದರು.

RELATED ARTICLES  ಕುಮಟಾದ ಉದಯ ಬಜಾರ್ ನಲ್ಲಿ "Monsoon Offer" : 10% ರಿಯಾಯತಿ ಮಾರಾಟ.

ಇನ್ನುಳಿದಂತೆ ಹಿಂದುಳಿದ ‘ಅ’ 1 ಸ್ಥಾನಕ್ಕೆ ಈರಾ ನಾರಾಯಣ ಗೌಡ ಕಳವೆ, ಸಾಮಾನ್ಯ ಮಹಿಳಾ ಅಭ್ಯರ್ಥಿಗಳ 2 ಸ್ಥಾನಕ್ಕೆ ಹಾಲಿ ನಿರ್ದೇಶಕರುಗಳಾಗಿದ್ದ ಇಂದಿರಾ ಹೆಗಡೆ ಮತ್ತು ಕಲ್ಪನಾ ಕೊಪ್ಪಳ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರದಿಂದ 8 ಜನರಿಗೆ ಅವಕಾಶವಿದ್ದು, 11 ಜನ ಉಮೇಧುವಾರಿಕೆ ತೋರಿದ್ದರು. ಹಿಂದುಳಿದ ವರ್ಗ ‘ಬ’ 1 ಸ್ಥಾನವಿದ್ದು, 2 ಜನರು ಮಾತ್ರ ಉಮೇಧುವಾರಿಕೆ ತೋರಿಸಿದ್ದರು.