ಹೊನ್ನಾವರ : ಪಟ್ಟಣದ ತುಳಸಿನಗರದ ಮನೆಯೊಂದರಲ್ಲಿ ಬಂಗಾರ ತೊಳೆದು ಕೊಡುವುದಾಗಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದ ವ್ಯಕ್ತಿಯೋರ್ವ ವಿಷ ಕುಡಿದು ಮೃತಪಟ್ಟ ಘಟನೆ ನಡೆದಿದೆ. ವ್ಯಕ್ತಿಯನ್ನು ವಿಚಾರಣೆಗೆ ಶನಿವಾರದಂದು ಹೊನ್ನಾವರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ನೀರು ಕುಡಿಯುತ್ತೇನೆ ಎಂದು ಹೇಳಿ ಬ್ಯಾಗಿನಲ್ಲಿದ್ದ ವಿಷ ಕುಡಿದು ಆತ ಮೃತಪಟ್ಟಿದ್ದಾನೆ ಎಂದು ಸಿಪಿಐ ಮಂಜುನಾಥ ತಿಳಿಸಿದ್ದಾರೆ‌.

RELATED ARTICLES  ಭೀಕರ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಿಹಾರ ಮೂಲದ ದಿಲೀಪ ಎಂದು ಗುರುತಿಸಲಾಗಿದೆ. ಪ್ರಕರಣ ಗಂಭೀರತೆ ಪಡೆದಿರುವ ಹಿನ್ನೆಲೆಯಲ್ಲಿ ಎಸ್.ಪಿ. ವಿಷ್ಣುವರ್ಧನ ಹಾಗೂ ಪೊಲೀಸ್ ಅಧಿಕಾರಿಗಳು ಠಾಣೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲಾಖೆಯಿಂದಲೇ ತಿಳಿದು ಬರಬೇಕಾಗಿದೆ.

RELATED ARTICLES  ಲಕ್ಷ ದೀಪೋತ್ಸವ ಕಾರ್ಯಕ್ರಮದ ಮಹಾ ಸಂಕಲ್ಪಪೂಜೆಯಲ್ಲಿ ಭಾಗವಹಿಸಿದ ಸಹಾಯಕ ಆಯುಕ್ತರು.