ಶಿರಸಿ: ಪ್ರಸಕ್ತ ವರ್ಷ ಪ್ರಕಟಗೊಂಡಿರುವ ಎಸ್‌ಎಸ್‌ಎಲ್‌ಸಿ (ಸ್ಟೇಟ್ ಮತ್ತು ಸಿಬಿಎಸ್‌ಇ) ನಲ್ಲಿ ಫಲಿತಾಂಶ ಶೇ. 95ಹಾಗೂ ಪಿಯುಸಿ ನಲ್ಲಿ ಶೇ. 90 ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಬೆಂಗಳೂರು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ.) ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಪ್ರಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಮೊಬೈಲ್ ರಿಪೇರಿ, ಸೇವೆ ಕುರಿತ ಉಚಿತ ತರಬೇತಿ

  ಅತೀ ಹೆಚ್ಚು ಅಂಕಗಳನ್ನು ಪಡೆದ ಆಯ್ದ ಮತ್ತು ನಿರ್ದಿಷ್ಟ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿಯ ಜೊತೆಯಲ್ಲಿ ದೃಢೀಕರಿಸಿದ ಅಂಕಪಟ್ಟಿ, ಜಾತಿ ಮತ್ತು ವರಮಾನ ಪತ್ರದೊಂದಿಗೆ ವಿದ್ಯಾರ್ಥಿಯ ಪೂರ್ಣ ವಿಳಾಸ ಮತ್ತು ಮೋಬೈಲ್ ನಂಬರ್ ಮಾಹಿತಿಯನ್ನು ಜುಲೈ 25 ರ ಒಳಗೆ- ಆರ್ ಎಲ್ ನಾಯಕ, #23, 3ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ ಹಿಂದುಗಡೆ, ನಾಮಧಾರಿ ಭವನ ಹತ್ತಿರ, ನಾಗರಭಾವಿ, 2 ನೇ ಹಂತ, ಬೆಂಗಳೂರು-560072ವಿಳಾಸಕ್ಕೆ ತಲುಪಿಸಲು ಸಂಘದ ಅಧ್ಯಕ್ಷ ಜಿ.ಬಿ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಡಾ|| ಮೋಹನ್ ದಾಸ್ ಕೆ.ಎನ್, (ಮೋ: Tel:+919900158367 ) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

RELATED ARTICLES  ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಮೆಗಾ ಫರ್ನಿಚರ್ ಮೇಳ : ಕೊನೆಯ ಮೂರು ದಿನಗಳು ಮಾತ್ರ ಬಾಕಿ : ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ ವಿಶೇಷ ಆಫರ್ ಗಳು.