ಕುಮಟಾ : ತಾಲೂಕಿನ ಹಳದೀಪುರದ ಆರ್.ಈ.ಎಸ್ ಸಂಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸಕರಿಗೆ ಸನ್ಮಾನ ಸಮಾರಂಭ ಯಶಸ್ವಿಯಾಗಿ ಸಂಪನ್ನವಾಯಿತು. ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಅಭಿಶೇಕ ಮಡಿವಾಳ, ಕಾವ್ಯಾ ನಾಯ್ಕ, ಸಾಧಿಯಾ ಖಾಜಿ, ಸಂಪತ್ ದೇಶಭಂಡಾರಿ, ದೀಕ್ಷಾ ಗೌಡ, ವಿಸ್ಮಿತಾ ಹರಿಕಾಂತ, ಸೌಮ್ಯಾ ಮುಕ್ರಿ, ಸೌಮ್ಯಾ ಗೌಡ, ನಿರಂಜನ ಹಳದೀಪುರ, ಅಮೂಲ್ಯಾ ಹರಿಕಾಂತ, ಐಶ್ವರ್ಯಾ ಹಡಪದ ಇವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಲೀಲಾಗಣಪತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜಿ ಜಿ ಸಭಾಹಿತ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಮಕ್ಕಳು ೧೦ನೇ ತರಗತಿಯಲ್ಲಿ ೧೦ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ೩ ವಿದ್ಯಾರ್ಥಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ನಮ್ಮ ವಿದ್ಯಾಲಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಇಂತಹ ವಿದ್ಯಾರ್ಥಿಗಳನ್ನು ಸನ್ಮಾಸುವ ಸೌಭಾಗ್ಯ ನನಗೆ ಸಂತೋಷ ತಂದಿದೆ ಎಂದರು.
ಅಧ್ಯಕ್ಷತೆಯನ್ನು ಆರ್.ಈ ಸೊಸೈಟಿಯ ಅಧ್ಯಕ್ಷರಾದ ಜಿ.ಸಿ ನಾಯ್ಕ ವಹಿಸಿ, ಮಾತನಾಡಿ ಶಿಕ್ಷಕರ ಶ್ರಮದಿಂದ ಈ ವರ್ಷ ನಮ್ಮ ವಿದ್ಯಾಲಯಕ್ಕೆ ೧೦ನೇ ತರಗತಿಯಲ್ಲಿ ಶೇಕಡಾ ೯೬.೩೬% ಫಲಿತಾಂಶದೊAದಿಗೆ ತಾಲೂಕಿಗೆ ೫ ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದರು. ಈ ಸಮಾರಂಭದಲ್ಲಿ ಆರ್.ಈ ಸೊಸೈಟಿ ಕಾರ್ಯದರ್ಶಿಗಳಾದ ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಶಾನಭಾಗ, ಉಪಾದ್ಯಕ್ಷರಾದ ಉಮಾರಾವ್, ಸದಸ್ಯರುಗಳಾದ ದಾಮೋದರ ಜಿ ನಾಯ್ಕ, ವಿನಾಯಕ ನಾಯ್ಕ, ಅಶೋಕ ನಾಯ್ಕ, ಗಣೇಶ ಪೈ, ಶಿವಾನಂದ ನಾಯ್ಕ, ರತ್ನಾಕರ ನಾಯ್ಕ ಉಪಸ್ಥಿತರಿದ್ದರು.
ದಾನಿಗಳಾದ ಪ್ರದೀಪ ಎಸ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಪೋಷಕರಾದ ಪ್ರಕಾಶ ದೇಶ ಭಂಡಾರಿ ಎಲ್ಲಾ ಪಾಲಕರ ಮತ್ತು ವಿದ್ಯಾರ್ಥಿಗಳ ಪರವಾಗಿ ಎಲ್ಲಾ ಶಿಕ್ಷಕ ಸಿಬ್ಬಂದಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವಿ.ಎಸ್ ನಾಯ್ಕ ಇದ್ದರು. ಮುಖ್ಯಾಧ್ಯಾಪಕ ಎಸ್.ಹೆಚ್ ಪೂಜಾರ ಸರ್ವರನ್ನು ಸ್ವಾಗತಿಸಿದರು. ಚಂದ್ರಪ್ಪ ಅಣ್ಣಪ್ಪನವರ್ ಕಾರ್ಯಕ್ರಮ ನಿರೂಪಿಸಿದರು. ಉಮೇಶ ಗೌಡ ವಂದಿಸಿದರು.