ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಣ್ಣಿಮನೆಯ ಹತ್ತಿರದ ರಸ್ತೆಯಲ್ಲಿ ಆಟೋ ಚಲಾಯಿಸಿ ಕೊಂಡು ಹೋಗುತ್ತಿದ್ದಾಗ ಬ್ರಹತ್ ಗಾತ್ರದ ಮರ
ಬಿದ್ದು ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಹಳಗೇರಿಯ ಶ್ರೀನಾಥ್ ಗೌಡ ತನ್ನ ಆಟೋ ರಿಕ್ಷಾವನ್ನು ಚಲಾಯಿಸಿ ಕೊಂಡು ಹೋಗುತ್ತಿದ್ದಾಗ, ಅಕಸ್ಮಾತಾಗಿ ಒಣಗಿದ ದೂಪದ ಮರವೊಂದು ಆಟೋದ ಮೇಲೆ ಬಿದ್ದಿರುವುದರಿಂದ ಆಟೋದ ಹಿಂದುಗಡೆಯ ಭಾಗ ಸಂಪೂರ್ಣ ಜಖಮ್ ಆಗಿದೆ.

RELATED ARTICLES  ಪಾದಾಚಾರಿಗೆ ಡಿಕ್ಕಿ ಹೊಡೆದ ಬೈಕ್ : ಓರ್ವ ಸಾವು.

ಚಾಲಕ ಕೂದಲು ಎಳೆಯ ಅಂತರದಲ್ಲಿ ಸಣ್ಣ ಪುಟ್ಟ ಘಾಯದಿಂದ ಅಪಾಯದಿಂದ ಪಾರಾಗಿದ್ದಾನೆ. ಅದೃಷ್ಟವಶಾತ್ ಆಟೋ ರಿಕ್ಷಾದ ಹಿಂದಿನ ಸೀಟ್ ನಲ್ಲಿ ಪ್ರಯಾಣಿಕರು ಇಲ್ಲದೆ ಇರುವುದರಿಂದ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.

RELATED ARTICLES  ಮಸ್ಕತ್ ನಲ್ಲಿ ಅಪಘಾತ : ಉತ್ತರಕನ್ನಡ ಮೂಲದ ವ್ಯಕ್ತಿ ಸಾವು