ಹೊನ್ನಾವರ : ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾಗ ವಾಹನ ಸಮೇತ 9 ಗೂಳಿಯನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಪಟ್ಟಣದ ಪ್ರತಿಭೋದಯ ಎದುರಿಗೆ ನಡೆದಿದೆ. ಸಮರ್ಪಕವಾಗಿ ಗಾಳಿ, ಆಹಾರದ ವ್ಯವಸ್ಥೆ ಕಲ್ಪಿಸದೇಯಾವುದೇ ಪಾಸ್ ಪರ್ಮೀಟ್ ಹೊಂದಿರದೇ ಆಂಧ್ರಪ್ರದೇಶ ನೊಂದಾವಣೆ ಹೊಂದಿರುವ ಲಾರಿಯಲ್ಲಿ 9 ಗೂಳಿಯನ್ನು ಅಕ್ರಮವಾಗಿ ಆಂಧ್ರಪ್ರದೇಶದಿಂದ ಭಟ್ಕಳಕ್ಕೆ ಸಾಗಿಸಲಾಗುತ್ತಿತ್ತು.
ಇದೇ ವೇಳೆ ಆಂಧ್ರಪ್ರದೇಶದ ಕರ್ನೂಲ್
ಜಿಲ್ಲೆಯ ಅನುಮುಲಾ ಮುದ್ದಿಲೇಟಿ ರೆಡ್ಡಿ, ಅನುಮುಲಾ ಮಲ್ಲಿಕಾರ್ಜುನ ರೆಡ್ಡಿ ಇರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾಗಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿಕೊಂಡಿದ್ದಾರೆ.