ಹೊನ್ನಾವರ: ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ತೃತೀಯ ವಲಯ ಮಹಿಳೆಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಟ್ಟಣದ ಎಸ್.ಡಿ.ಎಂ. ಮಹಾವಿದ್ಯಾಲಯದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಾಲೇಜಿನ ಬಿ.ಸಿ.ಎ 2 ಸೆಮ್‌ನ ಸುಪ್ರಿಯಾ ಶೇಟ್, ಬಿ.ಎಸ್ಸಿ 6 ಸೆಮ್ ಸಿಂಧು ಭಟ್ಟ, ಬಿ.ಕಾಂ 6 ಸೆಮ್ ಭುವಿ ವೈ. ಆರ್. ಇವರ ಒಳಗೊಂಡ ಕಾಲೇಜಿನ ತಂಡವು ಚಾಂಪಿಯನ್ ಆಗಿದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

RELATED ARTICLES  ಅರಬೈಲ್ ನಲ್ಲಿ ಲಾರಿ ಹಾಗೂ ಕಾರ್ ನಡುವೆ ಅಪಘಾತ‌: ಓರ್ವಸ ದುರ್ಮರಣ