ಕುಮಟಾ : ಮಳೆಗಾಲದ ಪ್ರಾರಂಭದೊAದಿಗೆ ಅನಾಹುತಗಳೂ ಪ್ರಾರಂಭವಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಮನೆಯ ಸನಿಹವಿದ್ದ ಧರೆಯಿಂದ ಬೃಹತ್ ಗಾತ್ರದ ಬಂಡೆಗಲ್ಲೊAದು ಉರುಳಿ ಬಂದು ಮನೆಯ ಹಿಂಭಾಗಕ್ಕೆ ಗುದ್ದಿ ಮನೆಯ ಗೋಡೆ ಒಂದೆಡೆ ಸಂಪೂರ್ಣ ಕುಸಿಯುವಂತಾಗಿದ್ದು, ಹಲವೆಡೆ ಬಿರುಕು ಬಿಟ್ಟ ಘಟನೆ ನಡೆದಿದೆ.
ಗಣೇಶ ತುಳಸು ಅಂಬಿಗ ಅವರಿಗೆ ಸೇರಿದ ಮನೆ ಇದಾಗಿದ್ದು, ಅವಘಡ ನಡೆಯುವ ಸಂದರ್ಭದಲ್ಲಿ ಕುಟುಂಬಸ್ಥರು ಮನೆಯೊಳಗಿದ್ದರು. ಏನೋ ಶಬ್ಧವಾದ ಸಂದರ್ಭದಲ್ಲಿ ಬೆಚ್ಚಿದ ಕೋಣೆಯೊಳಗಿದ್ದ ಜನರು ಹೊರಬಂದಿದ್ದಾರೆ. ಇದರಿಂದಾಗಿ ಕೂದಲೆಳೆಯ ಅಂತರದಲ್ಲಿ ಅವರುಗಳು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಾನಿಯ ಅಂದಾಜು ಪಡೆದಿದ್ದಾರೆ.
ಇದೇ ಮನೆಯಲ್ಲಿ ಜೂ.೨೮ರಂದು ಮನೆಯ ಮಗಳ ವಿವಾಹ ನಡೆಯಲಿದ್ದು, ಮನೆ ಮದುವೆಯ ಮನೆಯಂತೆ ಸಿಂಗಾರಗೊಂಡಿತ್ತು. ಆದರೆ ಈ ಅವಘಡದಿಂದ ಮನೆಯ ಅಂದ ಹಾಳಾಗಿದೆ. ಆದರೆ ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತ ತಪ್ಪಿದೆ. ಆದರೆ ಮನೆಯ ಅಂದ ಸಂಪೂರ್ಣ ಹಾಳಾಗಿದ್ದು, ಮದುವೆಯ ಸಂಭ್ರಮದ ನಡುವೆ ದೊಡ್ಡ ಆಘಾತವನ್ನು ನೀಡಿದೆ ಎಂದು ಮನೆಯವರು ಅಳಲು ತೋಡಿಕೊಂಡರು.