ಸಿದ್ದಾಪುರ : ಮಾವಿನಗುಂಡಿ ಚೆಕ್ ಪೋಸ್ಟ್ ಬಳಿ ಲಗೇಜ್ ವಾಹನದಲ್ಲಿ ಹೋರಿಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಶಿರಾಳಕೊಪ್ಪದಿಂದ ಭಟ್ಕಳಕ್ಕೆ ಹೋರಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ತಡೆಹಿಡಿದಿದ್ದಾರೆ.

RELATED ARTICLES  ಮೇಧಿನಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು.

ಸಿದ್ದಾಪುರ ಪಿಎಸ್ ಐ ಎಂ.ಜಿ ಕುಂಬಾರ ಹಾಗೂ ಸಿಬ್ಬಂದಿ ಮಾವಿನಗುಂಡಿ ಚೆಕ್ ಪೋಸ್ಟ್ ಬಳಿ ದಾಳಿ ಮಾಡಿ ಸೆರೆಹಿಡಿದಿದ್ದಾರೆ. ಶಿಕಾರಿಪುರ ತಾಲೂಕಿನ ತಾಳಗುಂದದ ಮಾರುತಿ ರಾಮಪ್ಪ ವಡಕನ್ನವರಮನಿ, ಜಿಯಾವುಲ್ಲಾ ಬಾಷಾಸಾಬ್ ಹಳ್ಳೂರಕೇರಿ, ಪೃಥ್ವಿರಾಜ ಸಹದೇವಪ್ಪ ವಡಕನ್ನವರಮನಿ ಎನ್ನುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ಹೋರಿ ಕೆಎ 15/ಎ 6690 ನಂಬರ್‌ನ ಮಹೇಂದ್ರ ವಾಹನ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ಉತ್ತರ ಕನ್ನಡದಲ್ಲಿ ಎಲ್ಲೆಲ್ಲಿ ಎಷ್ಟು ಕೊರೋನಾ ಕೇಸ್?