ಸಿದ್ದಾಪುರ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಈಗ ಹೊರಡಿಸಿರುವ ಪದವಿ ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೂಡುವಂತೆ ಆಗ್ರಹಿಸಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ತಾಲೂಕು ಎಬಿವಿಪಿ ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರರ ಮೂಲಕ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಪದವಿ ಕಾಲೇಜಿನ ಏಳುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಿಂದ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಲೇಜು ಪ್ರಾರಂಭಗೊಂಡು ಎರಡು ತಿಂಗಳಾದರೂ ಪದವಿ ಕಾಲೇಜುಗಳಿಗೆ ಉಪನ್ಯಾಸಕರು ಇಲ್ಲದೇ 15 ದಿನಗಳ ಹಿಂದಷ್ಟೇ ಅತಿಥಿ ಉಪನ್ಯಾಸಕರನ್ನು ನೇಮಕಮಾಡಲಾಗಿದೆ. ಇದರಿಂದ ಎಲ್ಲಾ ವಿಷಯಗಳು ಕಲಿಸಿ ಮುಗಿಯದ ಕಾರಣ ಈಗ ಪರೀಕ್ಷೆ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಕರ್ನಾಟಕ ವಿಶ್ವವಿದ್ಯಾಲಯ ಅ.23ರಿಂದ ಪರೀಕ್ಷೆ ನಡೆಸುವುದಾಗಿ ತಿಳಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳ ಮನವಿಯನ್ನು ಮನ್ನಿಸಬೇಕು. ವಿದ್ಯಾರ್ಥಿ ವಿರೋಧ ನೀತಿಯನ್ನು ಕೈಬಿಟ್ಟು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ನವೆಂಬರ್ 25ರ ನಂತರ ಪರೀಕ್ಷೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

RELATED ARTICLES  ಕುಮಟಾದಲ್ಲಿ ಬಿಜೆಪಿ ತೆಕ್ಕೆಗೆ ಪುರ‌ಸಭೆ: ಜಿದ್ದಾ ಜಿದ್ದಿನ ಹೋರಾಟದ ಫಲಿತಾಂಶ ಪ್ರಕಟ

ತಹಸೀಲ್ದಾರ ಪಟ್ಟರಾಜ ಗೌಡ ಅವರಿಗೆ ಎಪಿವಿಪಿ ನಗರ ಕಾರ್ಯದರ್ಶಿ ಶಿವರಾಮ ಭಟ್ಟ ಮನವಿ ಸಲ್ಲಿಸಿದರು. ತಾಲೂಕು ಸಂಚಾಲಕ ಚಂದನ ಶಾಸ್ತ್ರಿ, ಸುನಿತಾ, ವೈಷ್ಣವಿ,ಮಧುರಾ, ದೇವರಾಜ, ವಿನಯ ಮತ್ತಿತರರಿದ್ದರು.

RELATED ARTICLES  ಸ್ಕೂಟಿಯಿಂದ ಆಯತಪ್ಪಿ ಬಿದ್ದು ಗಂಭೀರ ಪೆಟ್ಟು.