ಕಾರವಾರ: ಜನಪ್ರಿಯತೆಯಿಂದ ಓಡುತ್ತಿದ್ದ ಯಶವಂತಪುರ ಮುರುಡೇಶ್ವರ ಪಡೀಲ್ ಬೈಪಾಸ್ ಮಾರ್ಗದ ವಿಶೇಷ ರೈಲಿನ ಓಡಾಟ ರದ್ದು ಮಾಡಲು ತಿರ್ಮಾನಿಸಿದ್ದ ರೈಲ್ವೇ ಇಲಾಖೆ ವಿರುದ್ಧ ಕುಂದಾಪುರ ಮತ್ತು ಉತ್ತರ ಕನ್ನಡ ರೈಲು ಸಂಘಟನೆಗಳು ಆಕ್ರೋಶಗೊಂಡ ಬಳಿಕ ಇಲಾಖೆ ರೈಲನ್ನು ಮುಂದುವರಿಸುವ ತೀರ್ಮಾನಕ್ಕೆ ಬಂದಿದೆ.

ಮಂಗಳೂರು ನಗರ ನಿಲ್ದಾಣಕ್ಕೆ ತೆರಳಿ ಘಂಟೆಗಟ್ಟಲೆ ಕಾಯ ಬೇಕಾದ ಪರಿಸ್ತಿತಿ ಇಲ್ಲದೆ ಪಡೀಲ್ ಬೈಪಾಸ್ ಮಾರ್ಗದಿಂದ ಓಡುವ ಯಶವಂತಪುರ ಮುರುಡೇಶ್ವರ ರೈಲು ಬೆಂಗಳೂರಿನಿಂದ ಶನಿವಾರ ರಾತ್ರಿ ತಡವಾಗಿ ಹೊರಡುವ ಮತ್ತು ಭಾನುವಾರ ಬೇಗನೆ ಬೆಂಗಳೂರು ತಲುಪ ಬಯಸುವ ಪ್ರಯಾಣಿಕರಿಗೆ ಹೇಳಿ ಮಾಡಿಸಿದಂತಿತ್ತು. ನೂರಾ ಹತ್ತು ಶೇಕಡಾಕಿಂತಲೂ ಜಾಸ್ತಿ ಜನಭರಿತವಾಗಿ ಪ್ರತೀ ಟ್ರಿಪ್ನಲ್ಲೂ ಓಡುತಿದ್ದ ಈ ರೈಲನ್ನು ಪ್ರತೀನಿತ್ಯ ಓಡಿಸುವಂತೆ ಕುಮಟಾ ಶಾಸಕ ದಿನಕರ್ ಶೆಟ್ಟಿ, ಸಂಸದ ಅನಂತ್‌ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮತ್ತಿತರರು ಒತ್ತಡ ತಂದಿದ್ದರು.

RELATED ARTICLES  ಹಿಜಾಬ್ ಕೇಸರಿ ಶಾಲು ವಿವಾದ - ಮೂರು ದಿನಗಳ ಕಾಲ ಶಾಲೆ, ಕಾಲೇಜುಗಳಿಗೆ ರಜೆ

ಈ ರೈಲನ್ನು ರದ್ದು ಮಾಡ ಹೊರಟ ಇಲಾಕೆತ ವಿರುದ್ದ ವ್ಯಾಪಕ ಆಕ್ರೋಶ ಮೂಡಿತ್ತು. ಪಂಚಗಂಗಾ ರೈಲಿಗೆ ಸರಿ ಸಮನಾಗಿ ಜನಪ್ರಿಯತೆ ಪಡೆದಿದ್ದ ರೈಲು ಕರಾವಳಿ ಜನರಿಗೆ ಬೇಕಾದ ಅತೀ ಅಗತ್ಯದ ಪಂಚಗಂಗಾ ರೈಲಿಗೆ ಪರ್ಯಾಯ ರೈಲಾಗಿ ಜನಪ್ರಿಯವಾಗಿತ್ತು. ಇದೀಗ ಮುಂದಿನ ಜುಲೈವರೆಗೆ ಓಡಾಟಕ್ಕೆ ಪ್ರಕಟಣೆ ಹೊರಟಿದ್ದು, ಈ ರೈಲನ್ನು ಶಾಶ್ವತವಾಗಿ ಓಡಿಸಲು ಸಂಸದ ಅನಂತ್‌ಕುಮಾರ್, ಕುಮಟಾ ಶಾಸಕ ದಿನಕರ್ ಶೆಟ್ಟಿ, ಕಾರವಾರ ಶಾಸಕ ಸತೀಶ್ ಸೈಲ್ ನೈರುತ್ಯ ರೈಲ್ವೆಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

RELATED ARTICLES  ಸೆಪ್ಟಂಬರ್ ಮೊದಲ ವಾರ ಬ್ಯಾಂಕ್ ತೆರೆದಿರುತ್ತದೆ ಎಂಬ ವದಂತಿ ಸುಳ್ಳು ಮಾಹಿತಿ ಆಗಿದೆ.