ಕುಮಟಾ : ಜೂ. 13 ರಿಂದ ಕುಮಟಾದ ಗ್ರಾಮದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಇದ್ದು ಭಕ್ತಾದಿಗಳನ್ನು ಹರಸುತ್ತಿದ್ದ ಆಂಜನೇಯನ್ನು ಇಂದು ಸಹಸ್ರಾರು ಭಕ್ತರು ಭಾವ ಪರವಶರಾಗಿ ಸ್ವಸ್ಥಾನಕ್ಕೆ ತಲುಪಿಸಿದರು.ಮಧ್ಯಾಹ್ನ 3:30ಕ್ಕೆ ಹನುಮನಿಗೆ ಪೂಜೆ ಸಲ್ಲಿಸಿ, ಹನುಮನ ಪಲ್ಲಕ್ಕಿಯನ್ನು ಜನರು ಹೊತ್ತು ಸಾಗಿದರು. ಜೈ ಶ್ರೀರಾಮ ಜಯರಾಮ ಘೋಷಣೆಯೊಂದಿಗೆ, ದಾರಿಯುದ್ದಕ್ಕೂ ಸೇರಿದ ಜನಸಾಗರ ಹನುಮನನ್ನು ಕಣ್ಣುತುಂಬಿಕೊಂಡರು.
ಹನುಮನ ಸವಾರಿಯು ಗಿಬ್ ಹೈಸ್ಕೂಲ್ ಕ್ರಾಸ್ ಮಾರ್ಗವಾಗಿ, ಹೆರವಟ್ಟಾ, ವಾಲಗಳ್ಳಿ, ಹಾರೋಡಿ, ಕೂಜಳ್ಳಿ, ಮಲ್ಲಾಪುರ ಕ್ರಾಸ್ ಮಾರ್ಗವಾಗಿ ಚಂದಾವರ ತಲುಪಿತು. ಅದ್ದೂರಿಯ ಮೆರವಣಿಗೆ ನಡೆಯಲ್ಲಿ ಆಬಾಲ ವೃದ್ಧರಾಗಿ, ದಾರಿಯುದ್ದಕ್ಕೂ 20 ಸಾವಿರಕ್ಕೂ ಅಧಿಕ ಜನರು ಭಾಗಿಗಳಾದರು.
ಬೆಳಿಗ್ಗೆಯಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಹನುಮನ ಪಲ್ಲಕ್ಕಿ ಸ್ವಸ್ಥಾನಕ್ಕೆ ತೆರಳುವಾಗ ಬಿಡುವುಕೊಟ್ಟಿತು. ಹನುಮನ ಪಲ್ಲಕ್ಕಿಗೆ ಸುಂದರವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಹನುಮನ ವಿಗ್ರಹಕ್ಕೂ ಜನ ಸಮುದಾಯ ಹೂಮಳೆ ಗರೆದರು.