ಕುಮಟಾ : ತಾಲೂಕಿನ ಹೆಗಡೆಯಲ್ಲಿ ಹವ್ಯಕ ಬಳಗದ ವತಿಯಿಂದ ಸ್ಮರಣ-ಮಿಲನ-ಮಥನ ಎಂಬ ಸ್ನೇಹಕೂಟ ಕಾರ್ಯಕ್ರಮ ಜರುಗಿತು. ಶ್ರೀ ಗೋಪಾಲಕೃಷ್ಣ ದೇವಾಲಯದ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮ ವನ್ನು ಹವ್ಯಕ ಸಮಾಜದ ಪ್ರಮುಖರಾದ ಶಿವಾನಂದ ಹೆಗಡೆ ಕಡತೋಕ ಹಾಗೂ ಎಮ್ ಜಿ ಭಟ್ಟ ಜಂಟಿಯಾಗಿ ಉದ್ಘಾಟಿಸಿದರು. ನಂತರ ಹೆಗಡೆಯ ಹವ್ಯಕ ಸಮಾಜದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಉನ್ನತ ಹುದ್ದೆ ಅಲಂಕರಿಸಿರುವ
. ಕೆನರಾ ಬ್ಯಾಂಕ್ ನ ಮಣಿಪಾಲದ ಸರ್ಕಲ್ ಆಫೀಸ್ ನ ಪ್ರಧಾನ ವ್ಯವಸ್ಥಾಪಕರಾದ ಎಮ್ ಜಿ ಪಂಡಿತ ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ್ ರೀಜನಲ್ ಆಫೀಸ್ ಧಾರವಾಡದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ ಎಸ್ ಭಟ್ಟ ಈ ಈರ್ವರನ್ನು ಹವ್ಯಕ ಬಳಗದ ಸದಸ್ಯರು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿಪ್ರ ಒಕ್ಕೂಟದ ವತಿಯಿಂದ ಡಾ ಗೋಪಾಲಕೃಷ್ಣ ಹೆಗಡೆ ಹಾಗೂ ಸದಸ್ಯರು ಒಕ್ಕೂಟದ ವತಿಯಿಂದ ಹಾಗೂ ಕೆ ಎಸ್ ಭಟ್ಟ ದಂಪತಿಗಳು ಕೂಡ ಸನ್ಮಾನಿಸಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಾನಂದ ಹೆಗಡೆ ಇಂದಿನ ಈ ಸ್ನೇಹಕೂಟ ಉತ್ತಮವಾಗಿ ಸಂಘಟಿಸಲಾಗಿದೆ ಈ ಸ್ನೇಹಕೂಟದಲ್ಲಿ ನಮ್ಮ ಸಮಾಜದ ಈರ್ವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಸಾಧನೆಗೆ ಗೌರವ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣವಾಗಿದೆ. ಕೆನರಾ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾದ ಎಮ್ ಜಿ ಪಂಡಿತ ಹಾಗೂ ಗ್ರಾಮೀಣ ವಿಕಾಸ ಬ್ಯಾಂಕ್ ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ ಎಸ್ ಭಟ್ಟ ಇವರಿಬ್ಬರಿಗೂ ನಾನು ಶುಭ ಕೋರುತ್ತೇನೆ ಈ ಈರ್ವರೂ ಕೂಡ ಅತ್ಯಂತ ಸರಳ ಸಜ್ಜನರು. ಇವತ್ತಿನ ದಿನದಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿರುವವ ಅಧಿಕಾರಿಗಳು ಜನರಿಗೆ ಹತ್ತಿರದಿಂದ ಸ್ಪಂದಿಸುವುದಾಗಲಿ ಉಪಕರಿಸುವುದಾಗಲಿ ಅಥವಾ ತಮ್ಮ ವ್ಯಾಪ್ತಿಯಲ್ಲಿ ಜನರಿಗೆ ಏನೆಲ್ಲ ಸಹಾಯ ಮಾಡೋಕೆ ಸಾಧ್ಯ ವೊ ಅದನ್ನು ಮಾಡೋಕೆ ಬಯಸೋದಿಲ್ಲ ಆದರೆ ಇವರಿಬ್ಬರೂ ಕೂಡ ಜನರಿಗೆ ಸ್ನೇಹಮಯಿಯಾಗಿ ತಮ್ಮಿಂದ ಜನರಿಗೆ ಏನೇನು ಸಹಾಯ ಸಹಕಾರ ಮಾಡೋಕೆ ಸಾಧ್ಯ ವೋ ಎಲ್ಲವನ್ನೂ ಮಾಡುತ್ತ ಜನರಿಗೆ ಅತ್ಯಂತ ಪ್ರೀಯರಾದವರಾಗಿದ್ದಾರೆ ಎಂದರು..

RELATED ARTICLES  ರಸ್ತೆ ಅಪಘಾತ : ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿಯವರಿಗೆ ಪೆಟ್ಟು


ಎಮ್ ಜಿ ಭಟ್ಟ ಮಾತನಾಡಿ ನಮ್ಮ ಸಮಾಜದ ಇಬ್ಬರು ಸಾಧಕರಿಗೆ ಸನ್ಮಾನಿಸಿ ಗೌರವಿಸಿರುವುದು ತುಂಬಾ ಸಂತೋಷ ಯಾಕಂದ್ರೆ ಸಾಧನೆಗೆ ಗೌರವ ಸಮರ್ಪಿಸುವುದು ನಮ್ಮ ಆದ್ಯ ಕರ್ತವ್ಯ..ಇದು ಸಂತೋಷ ಪಡುವ ವಿಷಯ ಜೊತೆಗೆ ಇಲ್ಲಿದ್ದ ಸಾಧಕರಿರಬಹುದು ವಿದ್ಯಾರ್ಥಿಗಳು ಇರಬಹುದು ನಾವೂ ಕೂಡ ಸನ್ಮಾನಕ್ಕೆ ಒಳಪಡಬೇಕು ಸಾಧನೆ ಮಾಡಬೇಕು ಎಂಬುದು ಮನಸಿಗೆ ಬಂದರೆ ನಮ್ಮ ಈ ಸನ್ಮಾನ ಕಾರ್ಯಕ್ರಮ ಸಾರ್ಥಕ ಹಾಗಾಗಿ ಇಬ್ಬರು ಹಿರಿಯ ಸಾಧಕರನ್ನು ಅಭಿನಂದಿಸುತ್ತೇನೆ ಎಂದರು..

RELATED ARTICLES  ವಿಷ್ಣುಗುಪ್ತ ವಿವಿವಿ ಗುರುಕುಲಕ್ಕೆ ಶೇ. 100 ಫಲಿತಾಂಶ


ಡಾ ಜಿ ಜಿ ಮಾತನಾಡಿ ಉತ್ತಮ ಗಮನಾರ್ಹ ಸಾಧನೆ ಮಾಡಿದ ನನ್ನ ಇಬ್ಬರು ಆತ್ಮೀಯರನ್ನು ಸನ್ಮಾನಿಸಿದ್ದು ತುಂಬಾ ಸಂತಸ ತಂದಿದೆ.. ಇಬ್ಬರೂ ಕೂಡ ತಮ್ಮ ತಮ್ಮ ಬ್ಯಾಂಕ್ ನ ಗ್ರಾಹಕರಿಗೆ ಹಾಗೂ ಸಮಾಜಕ್ಕೆ ನೆರವಾದವರಾಗಿದ್ದಾರೆ.. ಬಹಳ ಸರಳ ಸಜ್ಜನರೂ ಕೂಡ… ಇಬ್ಬರಿಗೂ ಶುಭ ಕೊಡುತ್ತೇನೆ..


ನಾವು ಏನಾದರೂ ಸಾಧನೆ ಮಾಡಲು ಹೊರಟಾಗ ನಮ್ಮವರು ನಮಗೆ ಬೆನ್ನು ತಟ್ಟಿ ಪ್ರೊತ್ಸಾಹಿಸಬೇಕೆ ವಿನಃ ಕಾಲೆಳೆಯಲು ಪ್ರಯತ್ನ ಪಡಬಾರದು ಇಂದಿನ ದಿನಗಳಲ್ಲಿ ಬೆಳೆಯುವವರನ್ನು ಕಾಲೆಳೆದು ಅವರನ್ನು ತುಳಿಯಲು ಪ್ರಯತ್ನ ಪಡುವವರ ಸಂಖ್ಯೆ ನೇ ಜಾಸ್ತಿ.. ನನ್ನ ಜೀವನದಲ್ಲಿಯೂ ಕೂಡ ನಾನು ಈ ಅನುಭನ ಕಂಡಿದ್ದೇನೆ ಆದರೆ ಯಾವುದಕ್ಕೂ ಜಗ್ಗದೇ ಸಮಾಜಕ್ಕೆ ನೆರವಾಗುವ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ಒತ್ತನ್ನು ಕೊಟ್ಟು ದೇವರ ಆಶೀರ್ವಾದ ಜನರ ಆಶೀರ್ವಾದ ದಿಂದ ಮುನ್ನೆಡೆಯುತ್ತಿದ್ದೇನೆ ಎಂದರು..
ಸನ್ಮಾನ ಸ್ವೀಕರಿಸಿದ ಎಮ್ ಜಿ ಪಂಡಿತ ಹಾಗೂ ಕೆ ಎಸ್ ಭಟ್ಟ ಮಾತನಾಡಿ ನಮ್ಮನ್ನು ಗುರುತಿಸಿ ಗೌರವಿಸಿದ್ದಕ್ಕೆ ಮನಸ್ಸು ತುಂಬಿ ಬಂದಿದೆ ಸಂಘಟಕರಿಗೂ ನಮ್ಮ ಸಮಾಜಕ್ಕೂ ಕೃತಜ್ಞತೆ ಸಲ್ಲಿಸುತ್ತೇವೆ.. ಗ್ರಾಮದೇವಿ ತಾಯಿ ಶ್ರೀ ಶಾಂತಿಕಾಂಬಾ ಪರಮೇಶ್ವರಿ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ಆಶೀರ್ವಾದ ವೇ ನಮ್ಮ ಈ ಸಾಧನೆಗೆ ಕಾರಣ ಎಂದರು