ಕಾರವಾರ : ಮಳೆಯ ಪ್ರಾರಂಭದೊಂದಿಗೆ ಮಳೆಯ ಅವಾಂತರಗಳು ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ
ಮಹಾಮಳೆಯಿಂದಾಗಿ ಓರ್ವ ವೃದ್ಧ ಮಹಿಳೆ ಮನೆಯಂಗಳದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಅರಗಾ ಗ್ರಾಮದಲ್ಲಿ ನಡೆದಿದೆ.

RELATED ARTICLES  ಕುಮಟಾಕ್ಕೆ ಬಂದ ರಾಕಿಂಗ್ ಸ್ಟಾರ್ ಯಶ್.

ತಾರಾಮತಿ ನಾಯ್ಕ (85) ಎಂದು ಸಾವನ್ನಪ್ಪಿದ ಮಹಿಳೆ. ನಿನ್ನೆಯಿಂದ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಸುರಿಯುತ್ತಿದೆ. ಹೀಗಾಗಿ ಮಳೆಯ ನೀರು ಮೃತ ತಾರಾಮತಿ ಅವರ ಮನೆಗೆ ನುಗ್ಗಿದ್ದು, ವೃದ್ಧ ಮಹಿಳೆ ಮನೆಯ ಅಂಗಳದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

RELATED ARTICLES  108 ತುರ್ತು ಸೇವೆಯಲ್ಲಿ ಸಮಸ್ಯೆ : ಆರೋಗ್ಯ ಸಚಿವರು ಹೇಳಿದ್ದೇನು?

ಸ್ಥಳಕ್ಕೆ ಪೊಲೀಸರು ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.