ಭಟ್ಕಳ: ತಾಲೂಕಿನಲ್ಲಿ ಮುಂಗಾರು ಜೋರಾಗಿದ್ದು ಸತತವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ವ್ಯತ್ಯಯವಾದ ಘಟನೆ ನಡೆದಿದೆ. ಜು.4, ಮಂಗಳವಾರ ಮಧ್ಯಾಹ್ನ ಆರಂಭವಾದ ಮಳೆ ಸಾಯಂಕಾಲದವರೆಗೂ ಮುಂದುವರಿದಿದ್ದು ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಮೂರು-ನಾಲ್ಕು ಕಡೆಗಳಲ್ಲಿ ನೀರು ನಿಂತು 2-3 ತಾಸುಗಳ ಕಾಲ ಸಂಚಾರ ವ್ಯತ್ಯಯವಾಗಿದೆ.

RELATED ARTICLES  ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.

ಕಳೆದ ವರ್ಷವೂ‌ ಕೂಡಾ ಭಾರೀ ಮಳೆಗೆ ಹಲವಾರು ಅವಘಡಗಳು ಸಂಭವಿಸಿದ್ದು, ಮಂಗಳವಾರದ ಮಳೆಯೂ ಕೂಡಾ ಅದನ್ನೇ ನೆನಪಿಸುತ್ತಿದೆ. ಅನೇಕ ಭಾಗಗಳಲ್ಲಿ ನೀರು ನುಗ್ಗಿ ಹಾನಿಯಾಗಿದ್ದರೆ, ನಗರದ ರಂಗೀಕಟ್ಟೆ, ಶಂಶುದ್ಧೀನ ಸರ್ಕಲ್, ಮಣ್ಕುಳಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಬೇಕಾಯಿತು.

RELATED ARTICLES  ಗಣೇಶ ಚತುರ್ಥಿ ಹಿನ್ನೆಲೆ : ಇಡಗುಂಜಿಯಲ್ಲಿ ಜನಸಾಗರ