ಮಂಗಳವಾರ ಬೆಳಿಗ್ಗೆ 10.30 ಕ್ಕೆ ಮಂಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಣಶಾಲೆಯ ಗಣಪತಿ ಸೋಮಯ್ಯ ನಾಯ್ಕ ಅವರ ಮನೆಯ ಮೇಲೆ ಬೃಹದಾಕಾರದ ಅಶ್ವತ್ ಮರವು ಬುಡ ಸಮೇತ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಅವರ ಮನೆಯ ಹಿತ್ತಲಿನಲ್ಲಿದ್ದ ಮೂರು ತೆಂಗಿನ ಮರ 8 ಅಡಿಕೆ ಮರವನ್ನು ಮುರಿದುಕೊಂಡು ಮನೆಯ ಮೇಲೆ ಬಿದ್ದು ಮನೆ ಸಂಪೂರ್ಣ ನಷ್ಟ ಹೊಂದಿದೆ. ಮನೆಯಲ್ಲಿ ವಾಸ್ತವ್ಯ ಮಾಡಲು ಸಹ ಅಯೋಗ್ಯವಾಗಿದೆ. ಮನೆಯಲ್ಲಿರುವ 2 ಮಕ್ಕಳು ಶಾಲೆಗೆ ಹೋಗಿದ್ದರು ಹಾಗೂ ಗಣಪತಿ ಸೋಮಯ್ಯ ನಾಯ್ಕ್ ಇವರು ಮನೆಯ ಹೊರಗಡೆ ಕೆಲಸಕ್ಕೆ ಹೋಗಿದ್ದರು ಗಣಪತಿಯವರ ಹೆಂಡತಿ ಹೊರಗಡೆ ಕೆಲಸ ಮಾಡುತ್ತಿರುವುದರಿಂದ ಯಾವುದೇ ಪ್ರಾಣಪಾಯವಾಗಿಲ್ಲ.

RELATED ARTICLES  ಶ್ರೀ ಶ್ರೀ ಶಂಭುಲಿಂಗೇಶ್ವರ ಸ್ವಾಮೀಜಿಗಳಿಗೆ ಗೋಕರ್ಣ ಗೌರವ