ಕುಮಟಾ : ನಗರದ ಪ್ರತಿಷ್ಠಿತ ಸೇವಾ ಸಂಸ್ಥೆಗಳಲ್ಲೊಂದಾದ ಲಯನ್ಸ ಕ್ಲಬ್ ಕುಮಟಾದ ಪ್ರಸಕ್ತ ೨೦೨೩-೨೪ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜು.೯ ರವಿವಾರ ಸಂಜೆ ೬.೩೦ ಕ್ಕೆ ಕುಮಟಾದ ಲಯನ್ಸ ಭವನದಲ್ಲಿ ಆಯೋಜಿಸಲಾಗಿದೆ.

    ನೂತನ ಅಧ್ಯಕ್ಷರಾಗಿ ದಾಮೋದರ ವೆಂಕಟೇಶ ಭಟ್, ಕಾರ್ಯದರ್ಶಿಯಾಗಿ ಎಮ್.ಕೆ.ಶಾನಭಾಗ ಮತ್ತು ಖಜಾಂಚಿಯಾಗಿ ಬಿ.ರಾಮಚಂದ್ರ ಭಟ್ಟ ಅವರು ಆಯ್ಕೆಯಾಗಿದ್ದು ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲೆ ೩೧೭ ಅ ನಿಕಟಪೂರ್ವ ಡಿಸ್ಟ್ರಿಕ್ಟ್ ಗವರ್ನರ್ ಡಾ. ಎಮ್.ಕೆ.ಭಟ್ಟ ರವರು ಪಾಲ್ಗೊಂಡು ಎಲ್ಲ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

RELATED ARTICLES  ಜನರಿಗೆ ಮುದ ನೀಡಿದ ದೀಪಾವಳಿ ವಿಶೇಷ ತಾಳಮದ್ದಲೆ ಕಾರ್ಯಕ್ರಮ

    ಸಮಾರಂಭದ ಮುಖ್ಯ ಅತಿಥಿಗಳಾಗಿ ಸೆಲ್ಕೋ ಸೋಲಾರ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಹಾಗೂ ಲಯನ್ಸ್ ಜಿಲ್ಲೆ ೩೧೭ ಬಿ. ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಡಾ.ಗಿರೀಶ ಟಿ. ಕುಚಿನಾಡ ಅವರು ಉಪಸ್ಥಿತರಿರುವರು.

RELATED ARTICLES  200ನೇ ದಿನದ ಗೋಕರ್ಣ ಗೌರವ