ಕಾರವಾರ : ಕರ್ನಾಟಕ ವಿಶ್ವವಿದ್ಯಾಲಯ ಈ ಬಾರಿ ಪರೀಕ್ಷೆಯ ವೇಳಾಪಟ್ಟಿಯನ್ನು ಅವೈಜ್ಙಾನಿಕವಾಗಿ ನಿಗದಿಪಡಿಸಿದ್ದು ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ಇಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಪ್ರತಿಭಟನೆ ನಡೆಸಿದರು.

RELATED ARTICLES  ಐತಿಹಾಸಿಕ ಕ್ಷಣದ ಸವಿ ನೆನಪಿನೊಂದಿಗೆ ಕದಂಬೋತ್ಸವಕ್ಕೆ ಅದ್ದೂರಿ ಚಾಲನೆ.

ಅವಧಿ ಪೂರ್ವ ಪರೀಕ್ಷೆಗೆ ವಿಶ್ವವಿದ್ಯಾಲಯ ತಯಾರಿ ನಡೆಸಿದೆ‌. ಹಾಗೂ ಒಂದು ಪರೀಕ್ಷೆಯಿಂದ ಮತ್ತೊಂದು ಪರೀಕ್ಷಗೆ ಯಾವುದೇ ಸಮಯಾವಕಾಶ ನೀಡಿಲ್ಲದ್ದು ಆರೋಪಿಸಿದರು. ಆದ್ದರಿಂದ ನಗರದ ಸರ್ಕಾರಿ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ದ ಪ್ರತಿಭಟನೆ ನಡೆಸಿದ್ದು ಈ ಕೂಡಲೇ ಪ್ರಕಟಿಸಿದ ನಿರ್ಧಾರ ಹಿಂಪಡಿಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

RELATED ARTICLES  ರಾಹುಲ್ ಗಾಂಧಿ ಆಗಮನಕ್ಕೆ ಸಜ್ಜಾಗಿದೆ ಭಟ್ಕಳ: ನಡೆಯಲಿದೆ ಬ್ರಹತ್ ಸಮಾವೇಶ