ಕುಮಟಾ : ತಾಲೂಕಿನಲ್ಲಿ ಗುರುವಾರ ಮಧ್ಯಾಹ್ನ 3:30ರ ಸುಮಾರಿಗೆ ಬೀಸಿದ ಪ್ರಚಂಡ ಗಾಳಿಯಿಂದಾಗಿ ಪಟ್ಟಣದ ನೆಲ್ಲಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ಮರಗಳು ಧರೆಗುರುಳಿದೆ. ನೆಲ್ಲಿಕೆರಿಯ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ಮಾವಿನ ಮರವೊಂದು ಗಾಳಿಯ ರಬಸಕ್ಕೆ ಧರೆಗೆ ಬಿದ್ದಿದ್ದು, ಗೂಡಂಗಡಿಯೊಂದಕ್ಕೆ ಹಾನಿಯಾಗಿದೆ. ವೇಗವಾಗಿ ಬೀಸಿದ ಗಾಳಿಯಿಂದ ಮರ ಮುರಿಯಲಾರಂಭಿಸಿದ್ದು, ಈ ಸಂದರ್ಭದಲ್ಲಿ ಗೂಡಂಗಡಿಕಾರ ಲಕ್ಷ್ಮಿಕಾಂತನ ಮೇಲೆ ಮರ ಮುರಿದುಬಿದ್ದು ಹಣೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಗಡಿಯ ಎದುರಿನಲ್ಲಿ ನಿಲ್ಲಿಸುತ್ತಿದ್ದ ಬೈಕ್ ಮೇಲೆ ಮರ ಮುರಿದು ಬಿದ್ದಿದ್ದು ಬೈಕ್ ಜಖಂ ಆಗಿದೆ.

RELATED ARTICLES  ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಕುರಿತು ಉಲ್ಲೇಖಿಸಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ.

ಅಲ್ಲಿಯೇ ಪಕ್ಕದಲ್ಲಿ ಮನೆಯ ಮಾಲೀಕನು ತನ್ನ ಖಾಸಗಿ ಜಾಗದಲ್ಲಿ ನಿಲ್ಲಿಸಿಟ್ಟಿದ್ದ ಕಾರಿನ ಮೇಲೆ ಬುಡ ಸಮೇತ ಕಿತ್ತು ಬಿದ್ದ ಮರವೊಂದು ಬಿದ್ದಿದ್ದು, ಕಾರಿನ ಗಾಜು ಒಡೆದು ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಇನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಣಕಿ ಮೈದಾನಕ್ಕೆ ಹೊಂದಿಕೊಂಡ ಜಾಗದಲ್ಲಿ ಬುಡ ಸಮೇತ 3 ಮರಗಳು ಕಿತ್ತಿ ಬಿದ್ದಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ತಾಲೂಕಿನ ಚಿತ್ರಗಿಯಿಂದ ಮರಾಕಲ್ ವರೆಗೆ ಹಾನಿ ಸಂಭವಿಸಿದ್ದು, 40 ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 3 ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದೆ. ಇದರಿಂದಾಗಿ ಪಟ್ಟಣದ ವಿದ್ಯುತ್ ಪೂರೈಕೆಗಾಗಿ ಹೆಸ್ಕಾಂ ಅಧಿಕಾರಿಗಳು ಸುರಿಯುವ ಮಳೆಯಲ್ಲೂ ಕಾರ್ಯಪ್ರವೃತ್ತರಾಗಿದ್ದಾರೆ.

RELATED ARTICLES  ಯಲ್ಲಾಪುರದಲ್ಲಿಂದು 7 ಮಂದಿಗೆ ಕೊರೊನಾ ಪಾಸಿಟಿವ್

ಕುಮಟಾ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ದೀವಗಿಯ ಕನ್ನಮ್ಮ ಪರಮೇಶ್ವರ ಮಕ್ರಿ, ಅಳ್ವೆಕೋಡಿಯ ಗಣಪತಿ ವಾಮನ ನಾಯಕ, ಹೆಗಡೆಯ ಭವಾನಿ ನರಸಿಂಹ ಅಂಬಿಗ, ವನ್ನಳ್ಳಿಯ ಲಕ್ಷ್ಮೀ ಭಾನು ನಾಯ್ಕ ಎಂಬುವವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಇನ್ನು ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಅಮೃತಾನ್ನ ಭೋಜನ ಶಾಲೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.

ರಭಸವಾಗಿ ಬೀಸಿದ ಗಾಳಿಗೆ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಲ್ಲಿಕೇರಿಯ ಶಾಲೆಯ ಕೊಠಡಿಯ ಮೇಲೆ ಮರ ಮರ ಬಿದ್ದು ಹಾನಿಯಾಗಿದೆ. ಶಾಲೆಗೆ ರಜೆ ಇರುವುದರಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.