ಕುಮಟಾ : ಸಾಫ್ಟವೇರ್ ಬಳಸಿ ನಕಲಿ ಆಧಾರ ಮತ್ತು ಪಾನ್ ಕಾರ್ಡ್ ತಯಾರಿಸಿ ದುರ್ಬಳಕೆ ಮಾಡುತ್ತಿದ್ದ ವ್ಯಕ್ತಿಯನ್ನು ಕುಮಟಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಿಲೀಪ ರಾಜೇಗೌಡ (೩೨) ಬಂಧಿತ. ತಾಲೂಕಿನ ಹೆಗಡೆಯ ಮಚಗೋಣ ನಿವಾಸಿ ಸುಬ್ರಾಯ ಕಡೆಕೋಡಿ ಅವರು ತಮ್ಮ ಮೃತ ಪುತ್ರ ಶಮಂತಕ ಕಡೆಕೋಡಿ ಅವರ ಹೆಸರಿನ ಆಧಾರ ಕಾರ್ಡ್‌ನ ದಾಖಲೆಗಳನ್ನು ತಿದ್ದಿ, ಗೋವಾದ ಕ್ರೋಮಾದಲ್ಲಿ ಐ ಫೋನ್ ಖರೀದಿಸಿ ಕಂತುಗಳನ್ನು ತುಂಬದೇ ಯಾರೋ ಮೋಸ ಮಾಡಿರುವ ಬಗ್ಗೆ ೨೬-೧-೨೦೨೨ ರಂದು ಪೊಲೀಸ್ ದೂರು ನೀಡಿದ್ದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ


ಪ್ರಕರಣ ಕೈಗೆತ್ತಿಕೊಂಡ ಪಿಎಸ್‌ಐ ನವೀನ ನಾಯ್ಕ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ತನ್ನದೇ ಸಾಫ್ಟವೇರ್ ಬಳಸಿ ಮೃತ ವ್ಯಕ್ತಿಯ, ಇತರರ ಆಧಾರ ಕಾರ್ಡ ಮತ್ತು ಪಾನ್ ಕಾರ್ಡಗಳನ್ನು ಫೋರ್ಜರಿ ಮಾಡಿ ಆಗಾಗ ತನ್ನ ಚಹರೆಗಳನ್ನು ಸಹ ಬದಲಾಯಿಸಿ, ಬೆಂಗಳೂರು, ಗೋವಾ, ತುಮಕೂರು, ಹಾಸನ ಮುಂತಾದ ಕಡೆಗಳಲ್ಲಿ ಇಂತಹದೇ ಕೃತ್ಯಗಳನ್ನು ನಡೆಸಿದ ಬಗ್ಗೆ ತಿಳಿದುಬಂದಿದೆ. ಇನ್‌ಕಮ್ ಟ್ಯಾಕ್ಸ್ ವೆಬ್‌ಸೈಟನ್ನು ಸಹ ಹ್ಯಾಕ್ ಮಾಡಿ ಕೊಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಂಗಳೂರು ಸಿ.ಓ.ಡಿ ಯಲ್ಲಿ ಈಗಾಗಲೇ ದಾಖಲಾಗಿ ಬಂಧಿತನಾಗಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರದಿಂದ ಕುಮಟಾ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ತನಿಖೆಯಲ್ಲಿ ಸಿಬ್ಬಂದಿ ಗಣೇಶ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ತಂಡ ಭಾಗಿಯಾಗಿತ್ತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

RELATED ARTICLES  ಭಾರತ್ ಜೋಡೋ ಪಾದಯಾತ್ರೆ ದೇಶದಲ್ಲಿ ಒಡೆದ ಮನಸ್ಸುಗಳನ್ನು ಪುನಃ ಬೆಸೆಯುವಲ್ಲಿ ಯಶಸ್ವಿಯಾಗಿದೆ : ತೆಂಗೇರಿ.