ಕುಮಟಾ ತಾಲೂಕಿನ ಪೋಸ್ಟ್ ಬೆಟ್ಕುಳಿಯ ನಿವಾಸಿಗಳಾಗಿದ್ದ ಸತೀಶ್ ಪಾಂಡುರಂಗ ನಾಯ್ಕ (38) ಮತ್ತು ಉಲ್ಲಾಸ ಜಟ್ಟಿ ಗಾವಡಿ (50) ಇವರು ಗುರುವಾರ ಅಘನಾಶಿನಿ ನದಿಯ ಅಂಚಿನಲ್ಲಿರುವ ಗದ್ದೆಗೆ ಬೇಲಿನಿರ್ಮಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆಬಿದ್ದು ಮೃತರಾಗಿದ್ದರು.

ಕಂದಾಯ ಇಲಾಖೆ ಸಚಿವ ಮಾನ್ಯ ಕೃಷ್ಣಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಾನ್ಯ ಮಂಕಾಳು ವೈದ್ಯ, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾನ್ಯ ದಿನಕರ ಕೆ. ಶೆಟ್ಟಿ ಅವರು ಇಂದು ಮೃತರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ತಲಾ 5,00,000 ರೂಪಾಯಿಗಳ ಚೆಕ್ ಅನ್ನು ಮೃತರ ಮನೆಯವರಿಗೆ ಹಸ್ತಾಂತರ ಮಾಡಿದರು.

RELATED ARTICLES  ಕೊರೋನಾ ಸಂಕಷ್ಟದಲ್ಲಿ ಇರುವವರಿಗೆ ಫುಡ್ ಕಿಟ್ ವಿತರಣೆ

ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಸಹಾಯಕ ಆಯುಕ್ತ ಶ್ರೀ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ಶ್ರೀ ನಾಯಕಲಮಠ, ತಾ. ಪಂ. ಕಾರ್ಯನಿರ್ವಣಾಧಿಕಾರಿ ಶ್ರೀಮತಿ ನಾಗರತ್ನಾ ನಾಯಕ, ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ವಿಶಾಲಾಕ್ಷಿ ಪಟಗಾರ, ಸದಸ್ಯರುಗಳಾದ ಶ್ರೀ ಸಂತೋಷ ಹರಿಕಾಂತ, ಶ್ರೀ ವಿಠೋಬ ಗಾವಡಿ, ಶ್ರೀ ನವೀನ ಪಟಗಾರ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಲಾಕ್ ಡೌನ್ ಇದ್ದರೂ ಗೋಕರ್ಣದಲ್ಲಿ ಪಿತೃಕಾರ್ಯ : ಎರಡೂ ಕುಟುಂಬಕ್ಕೂ ಹೋಂ ಕ್ವಾರಂಟೈನ್…!