ಕುಮಟಾ : ಟ್ಯಾಂಕರ್ ಒಂದರಿಂದ ಅನಿಲ ಸೋರಿಕೆಯಾಗಿ ಬರ್ಗಿಯಲ್ಲಿ ನಡೆದ ಟ್ಯಾಂಕರ್ ದುರಂತವೂ ಜನರ ಸ್ಮರಣೆಗೆ ಬಂದು ಭಯ ಹುಟ್ಟಿಸಿದ ಘಟನೆ ತಾಲೂಕಿನ ಕಡೇಕೋಡಿಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಂಭವಿಸಿದೆ. ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಹಿಂಭಾಗದ ಪೈಪ್‌ಗಳ ಮೂಲಕ ಬಿಳಿ ಬಣ್ಣದ ದ್ರವವು ಸೋರಿ ತಕ್ಷಣ ಸುತ್ತಲೂ ಮೋಡಗಳಂತೆ ಆವರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವರು ಗಾಬರಿಯಾಗಿ ಮನೆಗಳಿಂದ ಹೊರಗೆ ಓಡಿ ಬಂದು ಕಂಗಾಲಾಗಿ ನಿಂತರೆ, ಸಂಚರಿಸುವ ವಾಹನಗಳು ಅಲ್ಲಲ್ಲೇ ನಿಂತು ಹಿಂತಿರುಗಿ ದೂರ ಸರಿಯತೊಡಗಿದ್ದವು.

RELATED ARTICLES  ನಮ್ಮನೆ ಹಬ್ಬದಲ್ಲಿ ಘೋಷಿಸಿದ ಸೌರ ಬೆಳಕು ಭಾಗ್ಯ : ಕರ್ಣಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಅಡಿ‌ ಅನುಷ್ಠಾನ : ಘೋಷಿಸಿದ್ದು ಐದು, ಸಿಕ್ಕಿದ್ದು ಹತ್ತು ಕುಟುಂಬಗಳಿಗೆ !

ನಂತರ ಘಟನೆ ಬಗ್ಗೆ ಟ್ಯಾಂಕರ್ ಚಾಲಕನನ್ನು ಜನರು ವಿಚಾರಿಸಿದ್ದಾರೆ, ಇದು ಲಿಕ್ವಿಡ್ ನೈಟ್ರೋಜನ್ ದ್ರವವಾಗಿದ್ದು ಅಪಾಯವಿಲ್ಲ. ಸ್ವಲ್ಪ ಸಮಸ್ಯೆಯಾಗಿದ್ದು, ತಂತ್ರಜ್ಞರಿಗೆ ಕರೆ ಮಾಡಿದ್ದೇನೆ. ಬಂದು ಸರಿಪಡಿಸುತ್ತಾರೆ, ಇದರಿಂದ ಜನರಿಗೆ ಏನೂ ಸಮಸ್ಯೆ ಇಲ್ಲ. ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದ ನಂತರ ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES  ಒಂದೇ ಲಿಂಗದಲ್ಲಿ ತ್ರಿಮೂರ್ತಿಗಳ ಸಾನ್ನಿಧ್ಯ ಇರುವ ಏಕೈಕ ದೇವಾಲಯ