ಕುಮಟಾ : ಮಳೆ ಕಡಿಮೆಯಾದರೂ ತಾಲೂಕಿನಲ್ಲಿ ಮಳೆಯ ಅವಘಡಗಳು ಮುಂದುವರೆದಿದೆ. ಮಂಗಳವಾರ ಕಲಭಾಗದಲ್ಲಿ ಮನೆಯ ಛಾವಣಿಯೊಂದು ಕುಸಿದು ಮನೆಯಲ್ಲಿದ್ದ ವ್ಯಕ್ತಿಗೆ ತಲೆಗೆ ಪೆಟ್ಟುಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ‌.

ತಾಲೂಕಿನ ಕಲಭಾಗದಲ್ಲಿ ರಾಧಾ ಕೃಷ್ಣ ಭಂಡಾರಿಯವರಿಗೆ ಸೇರಿದ ಮನೆಯ ಛಾವಣಿಯು ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಮನೆಯ ಕೋಣೆಯಲ್ಲಿದ್ದ ರಾಧಾ ಅವರ ಪುತ್ರ ನೀಲೇಶ ಕೃಷ್ಣ ಭಂಡಾರಿ ಅವರ ತಲೆ ಮೇಲೆ ಹೆಂಚು ಬಿದ್ದ ಪರಿಣಾಮ ತಲೆಗೆ ಗಾಯವಾಗಿದೆ. ಗಾಯಗೊಂಡ ನೀಲೇಶನನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಯಾವುದೇ ಅಪಾಯ ಇಲ್ಲವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

RELATED ARTICLES  Financial Process Automation Using Rpa

ಛಾವಣಿ ಕುಸಿತದಿಂದ ಅಂದಾಜು 50 ಸಾವಿರ ರೂ. ಹಾನಿ ಉಂಟಾಗಿರುವುದೆಂದು ಅಂದಾಜಿಸಲಾಗಿದೆ. ಕುಮಟಾ ತಾಲೂಕಿನಲ್ಲಿ ಮಂಗಳವಾರ 1.0 ಮಿ.ಮೀ ಮಳೆಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.

RELATED ARTICLES  ನಾಡಿನ ಅಪರೂಪದ ಚಿಂತಕ ಕೆರೇಕೋಣದ ವಿಠ್ಠಲ ಭಂಡಾರಿ ಇನ್ನಿಲ್ಲ