ಕುಮಟಾ : ಕಳೆದೊಂದು ವರ್ಷದಿಂದ ಕುಮಟಾ, ಅಂಕೋಲಾ ವಿಭಾಗದ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡ ರಾಘವೇಂದ್ರ ಜಗಲಾಸರ ಅವರ ಬೀಳ್ಕೊಡುಗೆ ಹಾಗೂ ನೂತನ ಉಪವಿಭಾಗಾಧಿಕಾರಿಯಾಗಿ ನಿಯೋಜನೆಗೊಂಡಿರುವ ಕಲ್ಯಾಣಿ ವೆಂಕಟೇಶ ಕಾಂಬಳೆಯವರ ಸ್ವಾಗತ ಕಾರ್ಯಕ್ರಮ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆಯಿತು.

ಎ.ಸಿ ಕಛೇರಿಯ ಗ್ರೇಡ್ ೨ ತಹಶೀಲ್ದಾರ ಅಶೋಕ ಭಟ್ಟ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ಜಗಲಾಸರ ಅವರ ಕುರಿತಾಗಿ ಮಾತನಾಡುತ್ತಾ, ಚತುಷ್ಪತ ಕಾಮಗಾರಿ, ಐಗಳಕುರ್ವೆ ಸೇತುವೆ ಹಾಗೂ ಇತರ ಕಾರ್ಯದಲ್ಲಿ ಇವರ ಕಾರ್ಯ ಮರೆಯುವಂತಿಲ್ಲ. ಅಧಿಕಾರಿಯಾಗಿ ಖಡಕ್ ಆಗಿಯೂ ಕೆಲಸಗಾರರ ಜೊತೆಗೆ ಸ್ನೇಹಿತನಾಗಿಯೂ ಇದ್ದವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡ ರಾಘವೇಂದ್ರ ಜಗಲಾಸರ ಮಾತನಾಡಿ ಉತ್ತರ ಕರ್ನಾಟಕದವನಾದ ನನಗೆ ಪ್ರಾರಂಭದಲ್ಲಿ ಇಲ್ಲಿಗೆ ಬಂದಾಗ ನನಗೆ ಬೇಕಾದ ಊಟವೂ ಹೊಂದಿಕೆ‌ ಆಗಿರಲಿಲ್ಲ. ನಂತರದಲ್ಲಿ ಇಲ್ಲಿಯ ಜನರು ನಮಗೆ ಅತ್ಯಂತ ಪ್ರೀತಿಯವರಾದರು ಎಂದರು. ತಿಳಿದೋ ತಿಳಿಯದೆಯೋ ಯಾರಿಗಾದರೂ ನೋವು ಮಾಡಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡ ಅವರು, ಜನರ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು. 

RELATED ARTICLES  ಹೊನ್ನಾವರದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸಂಪನ್ನ.

ಕುಮಟಾದಲ್ಲಿ ಜಿಮ್ ಸ್ಥಾಪನೆ ಬಗ್ಗೆ, ಪರಿಸರ ರಕ್ಷಣೆ ಬಗ್ಗೆ ನನ್ನ ಮನದ ಇಂಗಿತವನ್ನು ಬೀಜ ಬಿತ್ತಿ ಅದರಲ್ಲಿ ಯಶಸ್ವಿಯಾದ ಹೆಮ್ಮೆಯಿದೆ. ಗೋಕರ್ಣದಲ್ಲಿ‌ ಸಾಗರಾರತಿ ಎಂಬ ವಿಶೇಷ ಕಾರ್ಯಕ್ರಮವನ್ನು ಸಂಯೋಜಿಸಿದ್ದು ಸಮಾಧಾನ ತಂದಿದೆ. ಬಾಡದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಮಾಡಿದ್ದು ಹೆಮ್ಮೆ ಎನಿಸಿದೆ ಎಂದರು.

ಚುನಾವಣೆಯ ಸಂದರ್ಭದಲ್ಲಿ ಎಲ್ಲರ ಸಹಕಾರ ಮರೆಯುವಂತಿಲ್ಲ. ಚುನಾವಣೆಯ ಮತ ಎಣಿಕೆಯ ದಿನ ತುಂಬಾ ಕುತೂಹಲ ಇತ್ತು. ನಾವು ನ್ಯಾಯುತವಾಗಿ ಎಲ್ಲಾ ಚ್ಯಾಲೆಂಜ್ ಗಳನ್ನೂ ಗೆದ್ದಿದ್ದೇವೆ.  ಅದಕ್ಕೆ ನಿಮ್ಮ ಸಹಕಾರ ತುಂಬಾ ಮಹತ್ವದ್ದು. ಶಿರಸಿ ಕುಮಟಾ ಹೈವೆಯ ಬಗ್ಗೆ ಮಹತ್ವದ ನಿರ್ಣಯ ಮಾಡಿದ್ದೇವೆ. ಜನರ ಅನುಕೂಲ ಮಾಡಿಕೊಡುವುದು ನಮ್ಮ ಪ್ರಥಮ ಆದ್ಯತೆ ಆಗಿತ್ತು ಎಂದರು. ಮಾರ್ಗದರ್ಶನ ಮಾಡಿದ ಮಮತಾ ದೇವಿ ಜಿ.ಎಸ್, ಮುರಳೀಧರ ಪ್ರಭು,ಎ.ಸಿ ದೇವರಾಜ, ರಾಜು ಮೊಗವೀರ  ಹಾಗೂ ಇತರರನ್ನು ಸ್ಮರಿಸಿಕೊಂಡರು.

RELATED ARTICLES  ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿ

ಅಂಕೋಲಾ ಗ್ರೇಡ್ ೨ ತಹಶೀಲ್ದಾರ ಗಿರೀಶ್ ಜಾಂಬಾವಾಡಿಕರ, ಕುಮಟಾ ಗ್ರೇಡ್ ೨ ತಹಶೀಲ್ದಾರ ಸತೀಶ ಗೌಡ, ಹೆಸ್ಕಾಂ ಇಲಾಖೆಯ ರಾಜೇಶ್ ಮಡಿವಾಳ, ತಹಶೀಲ್ದಾರರಾದ ಪ್ರವೀಣ ಹುಚ್ಚಣ್ಣನವರ್,  ಎಸ್.ಎಸ್ ನಾಯ್ಕಲಮಠ, ಎಲ್.ಐ.ಸಿ ಲಕ್ಷ್ಮೀಶ ಭಟ್ಟ  ಈ.ಓ ನಾಗರತ್ನಾ ನಾಯ್ಕ ತಮ್ಮ ತಮ್ಮ ಇಲಾಖೆಗೆ ರಾಘವೇಂದ್ರ ಜಗಲಾಸರ್ ಅವರು ನೀಡಿದ ಸಹಕಾರದ ಕುರಿತಾಗಿ ಸಂತಸ ವ್ಯಕ್ತಪಡಿಸಿದರು. 

ನೂತನ ಉಪವಿಭಾಗಾಧಿಕಾರಿಯಾಗಿ ನಿಯೋಜನೆಗೊಂಡಿರುವ ಕಲ್ಯಾಣಿ ವೆಂಕಟೇಶ ಕಾಂಬಳೆ ಎಲ್ಲಾ ಅಧಿಕಾರಿಗಳ ಸಹಕಾರ ಕೋರಿದರು.

ಅಂಕೋಲಾ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣನವರ್ ಸ್ವಾಗತಿಸಿದರು. ಕುಮಟಾ ತಹಶೀಲ್ದಾರ ಎಸ್.ಎಸ್ ನಾಯ್ಕಲಮಠ, ತಾಲೂಕಾ ಪಂಚಾಯತನ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯ್ಕ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಹಾಜರಿದ್ದರು‌.