ಕುಮಟಾ: ತಾಲ್ಲೂಕಿನ ಬರ್ಗಿಯ ಸರಕಾರಿ ಪ್ರೌಢ ಶಾಲೆಗೆ ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯದ ದೈಹಿಕ ಶಿಕ್ಷಣದ ಉಪನಿರ್ದೇಶಕರಾದ ಕೆ.ಜಿ. ತಲಬಕ್ಕನವರ್ ಆಕಸ್ಮಿಕವಾಗಿ ಭೇಟಿ ನೀಡಿದರು.

ಪ್ರಾರ್ಥನೆಯಿಂದ ಮೊದಲ್ಗೊಂಡು ಶಾಲೆಯ ದೈನಂದಿನ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ ಅವರು ಶಾಲಾ ಶಿಕ್ಷಕ-ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಕಂಡು ಮನದುಂಬಿ ಪ್ರಶಂಸಿಸಿದರು. ಶಾಲೆ ಪ್ರಾರಂಭವಾದಲ್ಲಿಂದ ಇದುವರೆಗಿನ ಮೂರುವರೆ ದಶಕಗಳ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಸಾಧಿಸುತ್ತ ಬಂದಿರುವುದನ್ನು ಗಮನಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

RELATED ARTICLES  ಕಾರವಾರದಲ್ಲಿ ಜಿಲ್ಲಾ ಪತ್ರಿಕಾ ದಿನಾಚರಣೆ ಜುಲೈ ೧ಕ್ಕೆ

ಅವರೊಂದಿಗೆ ತಾಲ್ಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಬಿ. ನಾಯಕ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕರಾದ ರವೀಂದ್ರ ಭಟ್ ಸೂರಿಯವರಿದ್ದರು. ಇದೇ ಸಂದರ್ಭದಲ್ಲಿ ಕೆ.ಜಿ. ತಲಬಕ್ಕನವರ್ ಹಾಗೂ ಎಸ್.ಬಿ. ನಾಯಕರವರನ್ನು ಶಾಲೆಯಿಂದ ಆಪ್ತವಾಗಿ ಸನ್ಮಾನಿಸಲಾಯಿತು.

RELATED ARTICLES  ಶ್ರೀ ಕ್ಷೇತ್ರ ಗೋಕರ್ಣಕ್ಕೆ ಭೇಟಿನೀಡಿದ ಪ್ರಭಾಕರ ಕೋರೆ.

ಈ ಗೌರವಾರ್ಪಣ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಸರಸ್ವತಿ ನಾಯಕರವರು ವಹಿಸಿದ್ದರು. ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು ಸ್ವಾಗತಿಸಿ-ನಿರೂಪಿಸಿದರು. ದೈಹಿಕ ಶಿಕ್ಷಕಿ ಚಂಪಾವತಿ ನಾಯ್ಕ ವಂದಿಸಿದರು. ಶಿಕ್ಷಕರಾದ ಯಶೋಧಾ, ಗೀತಾ ನಾಗೇಕರ್ , ವೀಣಾ ಗಾಂವಕರ್, ಕಮಲಾಬಾಯಿ ಭಾಗವತ್, ಫಿರೋಜ್ ಖಾನ್ ಹಾಗೂ ಪುನೀತ್‌ಕುಮಾರ್ ಮೊದಲಾದವರಿದ್ದರು.