ಕುಮಟಾ: ಪ್ರತಿ ವರ್ಷ ಮಳೆಗಾಲ ಆರಂಭವಾದ ಬಳಿಕ ಮಧ್ಯಂತರದಲ್ಲಿ ಸಮುದ್ರ ಶಾಂತವಾಗಿದ್ದರೆ ಮೀನುಗಾರರ ಪಾಲಿಗೆ ಬಂಗಡೆ ಮೀನಿನ ಅದೃಷ್ಟ ಖುಲಾಯಿಸುವುದಿದೆ. ಇಂದು ಸಮುದ್ರಕ್ಕಿಳಿದ್ದ ಮೀನುಗಾರರಲ್ಲಿ ಕೆಲವರಿಗೆ ಉತ್ತಮ ಬಂಗಡೆ ಮೀನು ಸಿಕ್ಕಿದೆ.

‘ಮೀನು ಪೇಟೆಗೆ ಸಿಕ್ಕಾಪಟ್ಟೆ ಬಂಗಡೆ ಮೀನು ಬಂದಿದೆಯಂತೆ’ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಮಂಗಳವಾರ ಸಂಜೆ ಸಾವಿರಾರು ಜನರು ಮೀನು ಮಾರುಕಟ್ಟೆ ಬಳಿ ಜಮಾಯಿಸಿ ಜಾತ್ರೆಯಂತೆ ನೆರೆದಿದ್ದರು.

RELATED ARTICLES  ಚಿತ್ರಕಲೆಯಲ್ಲಿ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ.

ಬುಧವಾರ ಕುಮಟಾ ಮೀನು ಮಾರುಕಟ್ಟೆಗೆ ಬಂಗಡೆ ಮೀನುಗಳು ಬಂದಿದ್ದು, ಮತ್ಸ್ಯ ಪ್ರಿಯರ ಬಾಯಲ್ಲಿ ನಿರೂರುವಂತೆ ಮಾಡಿದೆ. ಮೀನು ಮಾರುಕಟ್ಟೆಗೆ ಬರಪೂರ ಬಂಗಡೆ ಬಂದಿರುವ ಕಾರಣ ದರ ಕೂಡಾ ಇಳಿಕೆಯಾಗಿದೆ. 100 ರೂ. ಗೆ 20 ಬಂಗಡೆವರೆಗೆ ಮಾರಾಟವಾಗಿದೆ. ದೋಣಿಯ ಮೇಲೆ ತಂದು ಮೀನು ಮಾರುಕಟ್ಟೆಗೆ ಸಾಗಿಸುವ ಮೊದಲೇ ಗ್ರಾಹಕರು ಮುಗಿಬಿದ್ದು ಫ್ರೆಶ್ ಮೀನು ಖರೀದಿಗೆ ಮುಂದಾಗಿರುವ ದೃಶ್ಯ ಸಾಮಾನ್ಯವಾಗಿತ್ತು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಚರ್ಚಾ ಸ್ಪರ್ಧೆ ಕಾರ್ಯಕ್ರಮ