ಕುಮಟಾ : ಜನತೆಯ ಅನುಕೂಲತೆಯ ಕುರಿತಾಗಿ ಚಿಂತನೆ ನಡೆಸಿ, ಶಾಸಕರಾದ ದಿನಕರ ಕೆ ಶೆಟ್ಟಿ ಉಪ್ಪಿನ ಪಟ್ಟಣ ದಕ್ಕೆ ಬೊಗರಿಯಬೈಲ್ ಸೇತುವೆ ಸ್ಥಳ ವೀಕ್ಷಣೆ ಮಾಡಿದರು. ಈ ವರ್ಷ ಅಲ್ಲಿ ಸೈಡ್ ವಾಲ್ ಹಾಗೂ ಇತರ ಕಾಮಾಗಾರಿ ನಡೆದಿದ್ದು, ತೀವ್ರ ಮಳೆಯಿಂದಾಗಿ ಕಾರ್ಯ ಮಂದಗತಿಯಾಗಿ ಸಾಗಿತು. ಈ ಮಾರ್ಗದಲ್ಲಿ ಈಗಾಗಲೇ ಲಘು ವಾಹನಗಳು ಸಾಗುತ್ತಿದ್ದುದನ್ನು ಮನಗಂಡ ಶಾಸಕರು, ವಾಹನಗಳಿಗೆ ತೊಂದರೆಯಾಗದಂತೆ ಜಲ್ಲಿಗಳನ್ನು ಹಾಕಿ ರೋಲ್ ಮಾಡಿ ಆದಷ್ಟು ಬೇಗನೆ ಸಾರ್ವಜನಿಕರಿಗೆ ಈ ರಸ್ತೆಯನ್ನು ಅನುಕೂಲ ಮಾಡಿಕೊಡಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

RELATED ARTICLES  ಗೋಕರ್ಣ ಕ್ಕೆ ಶೀಘ್ರವೇ ಪಶುವೈದ್ಯರ ನೇಮಕ : ಚೌಹಾಣ್

ಸ್ಥಳದಲ್ಲಿ ಗ್ರಾಮ ಪಂಚಾಯಿತದ ಸದಸ್ಯರಾದ ದೇವು ಗೌಡ, ಮಹೇಶ ದೇಶ ಭಂಡಾರಿ ಹಾಗೂ ಗುತ್ತಿಗೆದಾರರಾದ ಸುದೀರ್ ಜಿ ಪಂಡಿತ್ ಹಾಗೂ ಊರ ನಾಗರಿಕರ ಹಾಜರಿದ್ದರು.

RELATED ARTICLES  ಹೊನ್ನಾವರದಲ್ಲಿ ಬಸ್ ಪಲ್ಟಿ ೨೫ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ

ಜನತೆಗೆ ಅನುಕೂಲ ಒದಗಿಸಿಕೊಡುವ ನಿಟ್ಟಿನಲ್ಲಿ ಶಾಸಕರು ಸ್ಥಳ ವೀಕ್ಷಣೆ ಮಾಡಿ, ಗುತ್ತಿಗೆದಾರರಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಜನತೆಯ ನೋವು ನಲಿವುಗಳಿಗೆ ಸದಾ ಸ್ಪಂದಿಸುವ ಶಾಸಕರ ಗುಣ ಮೆಚ್ಚುವಂತಹದ್ದು – ಗಜಾನನ ಪೈ, ನಿಕಟಪೂರ್ವ ಜಿ.ಪಂ ಸದಸ್ಯರು.