ಹೊನ್ನಾವರ : ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀಯವರನ್ನು ಅನರ್ಹಗೊಳಿಸಿ, ಅವರ ಜನಪರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಬಿ.ಜೆ.ಪಿ.ಯ ಷಡ್ಯಂತ್ರವನ್ನು ವಿರೋಧಿಸಿ ಮಂಕಿ ಮತ್ತು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಇಂದು ನಗರದ ಪಟ್ಟಣ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಮೌನ ಪ್ರತಿಭಟನೆ ನಡೆಸಿತು.


ಮೌನ ಪ್ರತಿಭಟನೆಗೂ ಮುನ್ನ ಪ್ರತಿಭಟನಾಕಾರರನ್ನು ಸ್ಡಾಗತಿಸಿ ಮಾತನಾಡಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ, ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ನೇತ್ರತ್ವದ ಬಿ.ಜೆ.ಪಿ.ಸರಕಾರ ದೇಶವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುತ್ತಿದ್ದರೇ, ರಾಹುಲ್ ಗಾಂಧೀಯವರು ದೇಶದ ಉದ್ದಗಲಕ್ಕೂ ಸಾವಿರಾರು ಕಿ.ಮೀ. ಭಾರತ ಜೋಡೋ ಪಾದಯಾತ್ರೆ ನಡೆಸುವ ಮೂಲಕ, ಒಡೆದ ಮನಸ್ಸುಗಳನ್ನು ಬೆಸೆಯುವ ಕೆಲಸಕ್ಕೆ ಮುಂದಾಗಿರುವುದು ನಮ್ಮೇಲ್ಲರಿಗೂ ಹೆಮ್ಮೆ ಎಂದರು. ದೇಶದಲ್ಲಿ ರಾಹುಲ್ ಗಾಂಧೀಯವರು ದಿನದಿಂದ ದಿನಕ್ಕೆ ಜನಪ್ರಿಯರಾಗುತ್ತಿರುವುದನ್ನು ಸಹಿಸದ ಬಿ.ಜೆ.ಪಿ.ಮುಖಂಡರು ರಾಹುಲ್ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸುವ ಮೂಲಕ ಬಡವರ ಪರ ಅವರ ಧ್ವನಿಯನ್ನು ಹುಟ್ಟಡಗಿಸಲು ಮುಂದಾಗಿರುವುದು ತೀರಾ ವಿಷಾದನೀಯ ಎಂದರು. ರಾಹುಲ್ ಗಾಂಧೀಯವರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ದೇಶದ ಕಾಂಗ್ರೆಸ್ ಕಾರ್ಯಕರ್ತರು ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ಎಚ್ಚರಿಸಿದರು.

RELATED ARTICLES  ದಾಂಡೇಲಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ


ಮಂಕಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಗೋವಿಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ರಾಹುಲ್ ಗಾಂಧಿಯವರ ಬಡವರ ಪರ ಧ್ವನಿಯನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ. ಪ್ರ‍್ರಧಾನಿ ಮೋದಿ ಮತ್ತು ಅವರ ಸಂಗಡಿಗರು ಕಳೆದ ಒಂಬತ್ತು ವರ್ಷಗಳಿಂದ ದೇಶವನ್ನು ಶ್ರೀಮಂತರ ಕೈಯಲ್ಲಿ ಒತ್ತೆ ಇಟ್ಟು, ದೇಶದ ಎಲ್ಲಾ ಲಾಭಯುಕ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಅಂಬಾನಿ,ಅಧಾನಿ ಮುಖಾಂತರ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದರು. ಇಂತಹ ಹೇಯ ಕೃತ್ಯವನ್ನು ಲೋಕಸಭೆಯಲ್ಲಿ ದಿಟ್ಟತನದಿಂದ ಪ್ರಶ್ನಿಸುತ್ತಿರುವ ರಾಹುಲ್ ಗಾಂಧೀಯವರ ಸದಸ್ಯತ್ವವನ್ನು ರದ್ದು ಮಾಡಿರುವ ಬಿ.ಜೆ.ಪಿ. ಸರಕಾರದ ಕ್ರಮ ಹೇಡಿತನದ ಪರಮಾವಧಿ ಎಂದರು.


ನAತರ ಮಂಕಿ ಮತ್ತು ಹೊನ್ನವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮಳೆಯ ನಡುವೆಯು ಅನೇಕ ಗಂಟೆಗಳ ಕಾಲ ಮೌನ ಪ್ರತಿಭಟನೆ ನಡೆಸಿ ದೇಶದ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧೀಯವರ ಜೊತೆಗಿದ್ದಾರೆ ಎನ್ನುವ ಸಂದೇಶ ಸಾರಿದರು.

RELATED ARTICLES  ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲಿಕೇರಿಯಲ್ಲಿ ವಾರ್ಷಿಕೋತ್ಸವ ಸಂಭ್ರಮ


ಮೌನ ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಎಂ.ಎನ್.ಸುಬ್ರಮಣ್ಯ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವನಿತಾ ನಾಯ್ಕ,ಬಿಸಿಸಿ ಉಪಾಧ್ಯಕ್ಷ ದಾಮೋದರ ನಾಯ್ಕ,ಜಿಲ್ಲಾ ಕಾಂಗ್ರೆಸ ಸದಸ್ಯ ಯೊಗೇಶ ರಾಯ್ಕರ, ಚಂದ್ರಕಾAತ ಕೋಚರೇಕರ,ಬಾಲಚಂದ್ರ ನಾಯ್ಕ,ಸುರೇಶ ಮೇಸ್ತ, ಶ್ರೀಕಾಂತ ಮೇಸ್ತ, ವಾಮನ ನಾಯ್ಕ, ಡಿಸಿಸಿ ಇಂಟಕ್ ಕಾರ್ಯದರ್ಶಿ ಕೇಶವ ಮೇಸ್ತ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಉಷಾ ನಾಯ್ಕ, ಪುಷ್ಪಾ ನಾಯ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೃಷ್ಣ ಗೌಡ, ಬಿಸಿಸಿ ಕಾರ್ಯದರ್ಶಿ ಅಣ್ಣಪ್ಪಾ ನಾಯ್ಕ, ಮಂಕಿ ಮತ್ತು ಹೊನ್ನಾವರ ವಿವಿಧ ವಿಭಾಗಗಳ ಅಧ್ಯಕ್ಷರಾದ ಸತೀಶ ನಾಯ್ಕ, ಗಜಾನನ ನಾಯ್ಕ, ಅಣ್ಣಪ್ಪ ನಾಯ್ಕ, ಚಂದ್ರಶೇಖರ ಚಾರೋಡಿ, ಜಕ್ರಿಯ್ಯಾ ಶೇಖ, ಕೃಷ್ಣ ಹರಿಜನ, ಆಗ್ನೇಲ್ ಡಯಾಸ, ಜಿಲ್ಲಾ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಮಂಜು ಮುಕ್ರಿ, ಗೋಯ್ದು ಮುಕ್ರಿ,ಯಶ್ವಂತ ನಾಯ್ಕ, ಮಂಜು ಖಾರ್ವಿ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.