ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ವತಿಯಿಂದ ಜು.15 ಶನಿವಾರ, ಸಂಜೆ 5-30 ಕ್ಕೆ ಇಲ್ಲಿನ ಟಿ.ಆರ್.ಸಿ. ಸಭಾಭವನದಲ್ಲಿ ಸಂಗೀತ ಕಾರ್ಯಕ್ರಮವನ್ನು ಟಿ.ಆರ್.ಸಿ.ಎ.ಸಿ. ಸೊಸೈಟಿಯ ಸಹಕಾರದೊಂದಿಗೆ ಆಯೋಜಿಸಲಾಗಿದೆ.
ಈ ಕಾರ್ಯಕ್ರದಲ್ಲಿ ಮೊದಲಿಗೆ ವಿ. ಉಮಾ ಹೆಗಡೆ ಶಿಷ್ಯೆಯಾದ ಕುಮಾರಿ ಸಂಗೀತಾ ಹೆಗಡೆಯವರ ಗಾಯನ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ಸಹಕಲಾವಿದರಾಗಿ ತಬಲಾದಲ್ಲಿ ಗುರುರಾಜ್ ಆಡುಕಳ ಹಾಗೂ ಸಂವಾದಿನಿಯಲ್ಲಿ ಸತೀಶ್ ಭಟ್ ಹೆಗ್ಗಾರ್ ಸಹಕರಿಸಲಿದ್ದಾರೆ.

RELATED ARTICLES  ಬಿಸಗೋಡ ಶಾಲೆ ಶೇ.84.61 ಫಲಿತಾಂಶ; ಸ್ನೇಹಾ ಪ್ರಥಮ


ನಂತರದಲ್ಲಿ ಅಂತರಾಷ್ಟ್ರೀಯ ಬಾನ್ಸುರಿ ಕಲಾವಿದರಾದ ಪಂ. ಪ್ರವೀಣ ಗೋಡ್ಕಿಂಡಿ ಬೆಂಗಳೂರು ಹಾಗೂ ಪ್ರಸಿದ್ಧ ಸಂವಾದಿನಿ ಕಲಾವಿದರಾದ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಇವರುಗಳಿಂದ ಅಪರೂಪದ ಬಾನ್ಸುರಿ, ಸಂವಾದಿನಿ ಜುಗಲ್ ಬಂದಿ ಕಾರ್ಯಕ್ರಮವು ನಡೆಯಲಿದ್ದು, ತಬಲಾದಲ್ಲಿ ಪ್ರಸಿದ್ಧ ತಬಲಾ ಕಲಾವಿದರಾದ ಪಂ. ರವೀಂದ್ರ ಯಾವಗಲ್ ಬೆಂಗಳೂರು ಇವರು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲಿದ್ದಾರೆ.

RELATED ARTICLES  ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ‌ ಟಿ.ಆರ್.ಸಿ. ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಉಪಸ್ಥಿತರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಂಗೀತಾಸಕ್ತರೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಗೌರವಾಧ್ಯಕ್ಷ ಎಂ. ಕೆ. ಹೆಗಡೆ ವಿನಂತಿಸಿಕೊಂಡಿದ್ದಾರೆ.