ಶಿರಸಿ: ಒಂದು ಗಂಟೆಗೂ ಹೆಚ್ಚು ಕಾಲ ಕಾಳಿಂಗ ಸರ್ಪವೊಂದು ಹೆಡೆ ಎತ್ತಿ ನಿಂತು ರಸ್ತೆಯನ್ನು ಬಂದ್ ಮಾಡಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಿಗದ್ದೆಯ ಬಳಿ ನಡೆದಿದೆ.
ಕಾಡಲ್ಲಿ ಆಹಾರ ಸಿಗದೆ ಕಾಡಿನಿಂದ ನಾಡಿಗೆ ಆಹಾರ ಅರಸಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಶಿರಸಿಯ ಮೆಣಸಿಗದ್ದೆಯ ಗ್ರಾಮಕ್ಕೆ ಬಂದಿತ್ತು. ಗ್ರಾಮದ ಮನೆಗಳಲ್ಲಿದ್ದ ಕೋಳಿ ಮರಿಗಳನ್ನ ನುಂಗುತ್ತಿದ್ದ ಕಾಳಿಂಗ ದಾರಿಯಲ್ಲಿ ಸಂಚರಿಸುವ ಜನರ ಮುಂದೆ ಹೆಡೆಎತ್ತಿ ನಿಂತು ಬುಸುಗುಡುತಿತ್ತು. ಹೆಡೆ ಎತ್ತಿ ನಿಂತ ಈ ಕಾಳಿಂಗ ಸರ್ಪವನ್ನು ನೋಡಿ ಜನರು ಭಯಭೀತರಾಗಿದ್ದರು.
ಗ್ರಾಮಸ್ಥರು ಉರುಗ ತಜ್ಞ ಪ್ರಶಾಂತ್ ಹುಲೇಕಲ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಅವರು ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.