ನರಭಕ್ಷಕರ ಹಾರರ್ ಕಥೆ ಕೇಳಿರುತ್ತೀರಿ, ಸಿನಿಮ ನೋಡಿರುತ್ತೀರಿ. ಆದರೆ ಇದು ಕಥೆಯೂ ಅಲ್ಲ, ಸಿನಿಮಾವೂ ಅಲ್ಲ, ದೇಶವನ್ನೇ ಬೆಚ್ಚಿ ಬೀಳಿಸಿದ ಯುವಕರ ನಡೆ. ಮೃತದೇಹವನ್ನು ಸುಡುವಾಗ ಯುವಕರು ಅರ್ಧಸುಟ್ಟ ಮೃತದೇಹವನ್ನು ತಿಂದಿದ್ದಾರೆ. ಮೃತದೇಹ ಸುಡುವಾಗಲೇ ಅಲ್ಲೇ ಇದ್ದು ಅರ್ಧ ಸುಟ್ಟಿದ್ದ ಮೃತದೇಹದಿಂದ ಮಾಂಸ ತೆಗೆದು ತಿನ್ನುತ್ತಿದ್ದ ಸಂದರ್ಭ ಊರವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಡಿಶಾದ ಮಯೂರ್​ಭಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಟುನಿ ಗ್ರಾಮದ ಸುಂದರ್ ಮೋಹನ್ ಸಿಂಗ್(58) ಹಾಗೂ ನರೇಂದ್ರ ಸಿಂಗ್ (25) ಅವರು ಮೃತದೇಹ ಸುಡುವಾಗಲೇ ಅಲ್ಲಿಯೇ ಮಾಂಸ ತೆಗೆದು ತಿಂದಿದ್ದಾರೆ. ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲಿ ಯುವಕರು ಅರ್ಧ ಸುಟ್ಟುಹೋಗಿದ್ದ ಮೃತದೇಹ ತಿನ್ನುತ್ತಿದ್ದ ದೃಶ್ಯ ಗ್ರಾಮಸ್ಥರಿಗೆ ಕಂಡುಬಂದಿದೆ.

RELATED ARTICLES  ನಾಳೆ 2nd P.U.C ಫಲಿತಾಂಶ

ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಗ್ರಾಮಸ್ಥರು ಸ್ಮಶಾನಕ್ಕೆ ಕೊಂಡೊಯ್ದಿದ್ದರು. ಅಂತ್ಯಸಂಸ್ಕಾರ ನಡೆಯುತ್ತಿರುವಾಗಲೇ ಇಬ್ಬರೂ ಸೇರಿ ಅರ್ಧ ಸುಟ್ಟಿದ್ದ ಮೃತದೇಹದ ಸ್ವಲ್ಪ ಭಾಗವನ್ನು ತೆಗೆದುಕೊಂಡು ಹೋಗಿ ತಿನ್ನಲಾರಂಭಿಸಿದ್ದರು. ಇಬ್ಬರೂ ಅಮಲೇರಿದ್ದಂತಹ ಸ್ಥಿತಿಯಲ್ಲಿ ಈ ಕೃತ್ಯ ಎಸಗಿದ್ದಾರೆ. ಅವರಿಬ್ಬರಲ್ಲಿ ಒಬ್ಬರಾದ ಸುಂದರ್ ಮೋಹನ್ ಸಿಂಗ್ ಮಾಂತ್ರಿಕನಾಗಿದ್ದಾರೆ. ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಬಡಸಾಹಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

RELATED ARTICLES  ಕುಮಟಾ, ಹೊನ್ನಾವರದಲ್ಲಿ ಕೊರೋನಾ ಲಸಿಕೆ ವಿತರಣಾ ಮಾಹಿತಿ

ಇಬ್ಬರ ವಿರುದ್ಧವೂ ಸೆಕ್ಷನ್ 297ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಮನುಷ್ಯ ಮಾಂಸವನ್ನು ತಿನ್ನುವುದನ್ನು ನೋಡಿ ನನೆಗ ಭಯವಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಘಟನೆ ಬಗ್ಗೆ ವಿವರಿಸಿದ್ದಾರೆ.