ಮಳೆಯಲ್ಲಿ ನೆನೆಯುವುದು ಒಂಥರಾ ಮಜಾ ಕೊಡುವ ಕ್ಷಣ. ನೀರಿನ ಚಿಟಪಟ ಸದ್ದಿಗೆ ಕಿವಿಗೊಡುತ್ತಾ ನೆನೆಯುತ್ತಾ ಮಳೆಯನ್ನು ಆನಂದಿಸುವುದು ಹೊಸದೇನೂ ಅಲ್ಲ. ಶೀತವಾಗುತ್ತದೆ ಎಂಬ ಭಯವಿದ್ದರೂ ಧೈರ್ಯ ಮಾಡಿ ಕೆಲವರು ಮಳೆಯಲ್ಲಿ ನೆನೆದು ಆನಂದಿಸುತ್ತಾರೆ. ಇನ್ನು ಸಿನಿಮಾ ದೃಶ್ಯಗಳಿಗೂ ಮಳೆ ಕಳೆ ತರುತ್ತದೆ. ಹೀರೋ ಹೀರೋಯಿನ್ ಮಳೆಯಲ್ಲಿ ನೆನೆಯುತ್ತಾ ಡ್ಯೂಯೆಟ್ ಸಾಂಗ್‌ಗೆ ಸ್ಟೆಪ್ಸ್‌ ಹಾಕುವ ದೃಶ್ಯಗಳು ಚಿತ್ರಗಳಲ್ಲಿ ಸಾಮಾನ್ಯ. ಆದರೆ, ಇಲ್ಲೊಂದು ಜೋಡಿ ನಿಜ ಜೀವನದಲ್ಲೂ ಇಂತಹದ್ದೇ ಸನ್ನಿವೇಶವನ್ನು ಮರುಸೃಷ್ಟಿಸುವ ಯತ್ನ ಮಾಡಿದೆ.

RELATED ARTICLES  ಅನಂತಕುಮಾರ ಹೆಗಡೆಗೆ ಸಿಗಲಿದೆಯೇ ಗುಡ್ ನ್ಯೂಸ್..?

ಸದ್ಯ ಇಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ. ಯುವಕ ಮತ್ತು ಯುವತಿ ಮಳೆಯಲ್ಲಿ ನೆನೆಯುತ್ತಾ ನೃತ್ಯ ಮಾಡುವ ದೃಶ್ಯವಿದು. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ `ಜಬ್ ವಿ ಮೆಟ್’ ಚಲನಚಿತ್ರದ ತುಮ್ ಸೆ ಹೈ ಹಾಡಿಗೆ ಈ ಜೋಡಿ ಭರ್ಜರಿ ಸ್ಟೆಪ್ಸ್‌ ಹಾಕಿದೆ. ಅದೂ ಬ್ಯುಸಿ ರಸ್ತೆಯ ಬದಿಯಲ್ಲಿ.

RELATED ARTICLES  ಭಾರತೀಯ ಸೈನ್ಯದ 'ಅಗ್ನಿವೀರ್' ಮೂಲಕ ದೇಶ ಸೇವೆಗೆ ಹೊರಟ ಹೊನ್ನಾವರದ ಹುಡುಗ.

ಟ್ವಿಟ್ಟರ್ ಖಾತೆಯಲ್ಲಿ ಇಂತಹದ್ದೊಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಯುವಜೋಡಿ ಮಳೆಯ ಖುಷಿಯ ವಾತಾವರಣವನ್ನು ಆನಂದಿಸುವ ದೃಶ್ಯವಿದೆ. ಬ್ಯುಸಿ ರಸ್ತೆಯ ಪಕ್ಕದಲ್ಲಿ ಈ ಜೋಡಿ ಹಾಡಿಗೆ ಹೆಜ್ಜೆ ಹಾಕುವುದು ಇಲ್ಲಿ ಕಾಣಿಸುತ್ತದೆ. 21 ಸೆಕೆಂಡುಗಳ ಈ ಕ್ಲಿಪ್ ಇದು.