ಶಿರಸಿ: ಖಾಸಗಿ ಬಸ್‌ ಹಾಗೂ ಕಾರುಗಳ ಅತಿ ವೇಗದ ಚಾಲನೆ, ಕುಡಿದ ಮತ್ತಿನಲ್ಲಿ ಬಸ್‌ ಚಲಾಯಿಸುವ ಚಾಲಕರಿಗೆ ಶಿರಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾತ್ರಿ 9 ಗಂಟೆಯಿಂದ 11 ಗಂಟೆ ವರೆಗೆ ಸಾಮ್ರಾಟ್‌ ಹೊಟೆಲ್‌ ಎದುರು, ಶಿವಾಜಿ ಚೌಕ, ರಭೂ ಸರ್ಕಲ್‌, ಐದು ರಸ್ತೆ ಸರ್ಕಲ್‌ , ಅಶ್ವಿನಿ ಸರ್ಕಲ್‌, ರಾಘವೇಂದ್ರ ಸರ್ಕಲ್‌, ನೀಲೆಕಣಿ ಹಾಗೂ ಯಲ್ಲಾಪುರ ನಾಕಾದಲ್ಲಿ ತಪಾಸಣೆ ನಡೆಸಿದ ಶಿರಸಿ ಪೊಲೀಸರು ಹಲವು ಬಸ್‌ ಚಾಲಕರ ಮೇಲೆ. ಪ್ರಕರಣ ದಾಖಲಿಸಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು

ಖಾಸಗಿ ಬಸ್‌ಗಳ ಅತಿ ವೇಗದ ಚಾಲನೆ , ಕುಡಿದು ವಾಹನ ಚಲಾಯಿಸುವವರ ಹಾಗೂ ಹೈ ಬೀಂ ಲೈಟ್‌ ಹಾಕಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗೋಕರ್ಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಚಾಲಕನನ್ನು ಸಾಮ್ರಾಟ್‌ ಹೊಟೆಲ್‌ ಸಮೀಪ ವಶಕ್ಕೆ ಪಡೆದು ಆಲ್ಫೋ ಮೀಟರ್‌ ಮೂಲಕ ಚೆಕ್‌ ಮಾಡಿ ಮದ್ಯಪಾನ ಮಾಡಿದ್ದರಿಂದ ಪ್ರಕರಣ ದಾಖಲಿಸಿ, ಆ ಚಾಲಕನನ್ನು ಬದಲಿಸಿ ಬೇರೆ ಚಾಲಕನನ್ನು ಕರೆಸಿ ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

RELATED ARTICLES  ಶ್ರೀ ಮಳಲಿ ಲಕ್ಷ್ಮೀ ದೇವಿ ದೇವಾಲಯ ನಂಬಿದವರ ಸಲಹುವ ತಾಣ

ಡಿಎಸ್‌ಪಿ ಗಣೇಶ್‌ ಕೆ.ಎಲ್‌ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ, ಪಿಎಸ್‌ಐಗಳಾದ ಭೀಮಾ ಶಂಕರ್‌, ರಾಜಕುಮಾರ್‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಾಂತೇಶ, ಲಕ್ಷ್ಮಣ ಸಂದೀಪ ಮೋಹನ, ಪ್ರವೀಣ,ರಾಮಯ್ಯ, ಪಾಂಡು, ರಾಮದೇವ ನಾಗಪ್ಪ. ಹನುಮಂತ, ಸುರೇಶ್‌, ಅನಿಲ್‌ , ನಾಗಪ್ಪ, ಶಿವಲಿಂಗ, ಸದ್ದಾಂ, ಜಗದೀಶ್‌ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರ. ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.