ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಡಾ. ಹೆಚ್.ಸಿ ಮಹದೇವಪ್ಪನವರು ಹೆಚ್.ಕೆ ರಮೇಶ್ ಎಂಬ ವ್ಯಕ್ತಿಯನ್ನು ಮಾಧ್ಯಮ ಸಂಯೋಜಕನನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಆದರೆ, ಈತನ ಸಾಮಾಜಿಕ ಜಾಲತಾಣವನ್ನು ಒಮ್ಮೆ ನೋಡಿ, ಪೋಸ್ಟ್‌ಗಳನ್ನು ಓದಿಬಂದರೆ ಸಾಕು ಒಮ್ಮೆ ಓದಿದ ಬಾಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅಷ್ಟು ಅಸಹ್ಯದ ಭಾಷೆ. ಹಿರಿಯರೂ, ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳೂ ಆದ ಹೆಚ್‌.ಸಿ ದೇವೇಗೌಡರ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಬರೆದಿದ್ದಾರೆ. ಇದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದಲೂ ಮಾನ್ಯ ದೇವೇಗೌಡರ ಕುರಿತು ಅಸಹ್ಯದ ಮಾತುಗಳನ್ನೇ ಆಡಿದ್ದಾರೆ. ದೇವೇಗೌಡರ ಹುಟ್ಟು ಹಬ್ಬದಂದು ‘ತನ್ನ ಮಕ್ಕಳಿಗೆ ಅಧಿಕಾರ ಕೊಡಿಸಲು ಯಾವ ಕೆಳಮಟ್ಟದ ಹಂತಕ್ಕಾದರೂ ಇಳಿಯಬಲ್ಲ ಅವಕಾಶವಾದಿ ರಾಜಕಾರಣಿಗೆ ಜನ್ಮದಿನದ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದ. ಚುನಾವಣಾ ಸಮಯದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದ ಕುಮಾರಸ್ವಾಮಿಯವರನ್ನು ‘ಮೂರನೇ ದರ್ಜೆಯ ವ್ಯಕ್ತಿ’ ಎಂದೇ ಸಂಬೋಧಿಸಿ, ಮಿಣಿಮಿಣಿಅಣ್ಣ ಎಂದು ಟ್ರಾಲ್ ಕೂಡ ಮಾಡಿದ್ದಾನೆ. ಈ ಹಿಂದೆ ಭೂ ಸುಧಾರಣಾ ತಿದ್ದುಪಡಿ ಕುರಿತು ಮಾತನಾಡಿದ್ದ ಮಣ್ಣಿನ ಮಕ್ಕಳ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಸಭ್ಯ ಸಮಾಜ ನಿಜಕ್ಕೂ ಒಪ್ಪದು. ತನ್ನ ಟ್ವೀಟ್‌ನಲ್ಲಿ ಅಪ್ಪ-ಮಕ್ಕಳಿಗೆ ಚಪ್ಪಲಿ ಹಾರ ಹಾಕುವೆ ಎಂಬ ಬೆದರಿಕೆಯನ್ನೂ ಆತ ಹಾಕಿದ್ದ.

RELATED ARTICLES  ಮುಳ್ಳೇರಿಯಾ ಹವ್ಯಕ ಮಂಡಲ ಸಭೆ ಸಂಪನ್ನ.

ಅಷ್ಟೇ ಅಲ್ಲದೇ, ಉಚಿತ ಗ್ಯಾರಂಟಿಗಳನ್ನು ಚುನಾವಣೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್ಸು, ಚುನಾವಣೆಯ ನಂತರ ಗ್ಯಾರಂಟಿಗಳಿಗೆ ಷರತ್ತಿನ ಮೇಲೆ ಷರತ್ತನ್ನು ಹಾಕಿತು. ಮಾಧ್ಯಮದವರಾಗಿ ಇದನ್ನು ಪ್ರಶ್ನಿಸಿದ್ದ ಪಬ್ಲಿಕ್ ಟಿ.ವಿಯ ರಂಗಣ್ಣ ಅವರ ಬಗ್ಗೆಯೂ ಅಸಹ್ಯವಾಗಿ ಬರೆದಿದ್ದಾನೆ. ಅವರಿಗೆ ‘ಬೇವರ್ಸಿ ಕರೆಂಟ್ ವಿಜ್ಞಾನಿ’ ಎಂದು ತುಚ್ಛವಾಗಿ ನಿಂದಿಸಿದ್ದಾನೆ.

ಭಾರತ ಹಿಂದೂಗಳ ನಾಡು. ಜಾತಿ-ಪಕ್ಷ ಎಂಬ ಗೊಡವೆಯಿಲ್ಲದೇ ಕಿತ್ತಾಡದೇ ಇಂದಿಗೂ ಕೋಟಿ-ಕೋಟಿ ಹಿಂದೂಗಳ ಹೃದಯದಲ್ಲಿ ನೆಲೆಸಿರುವುದು ಪ್ರಭು ಶ್ರೀರಾಮ. ಅಂತಹ ರಾಮಮಂದಿರದ ಕನಸು ನನಸಾದ ದಿನ, ಸಹಜವಾಗಿ ಪ್ರತಿಯೊಬ್ಬ ಹಿಂದುವೂ ಸಂತಸಪಟ್ಟಿದ್ದರೆ, ಕಾಂಗ್ರೆಸ್ ರಾಮಮಂದಿರವನ್ನು ಬೆಂಬಲಿಸಿದರೆ ಓಟು ಹಾಕುವುದಿಲ್ಲ ಎಂಬರ್ಥದ ಟ್ವೀಟ್ ಕೂಡ ಮಾಡಿದ್ದ ಈತ.

ಜೊತೆಗೆ, ಇತ್ತೀಚೆಗೆ ತಮ್ಮ ಕಾರ್ಯಕರ್ತನ ಸಾವಿಗೆ ನ್ಯಾಯ ಕೇಳಿ ಮೌನ ಪ್ರತಿಭಟನೆ ನಡೆಸುತ್ತಿದ್ದ ಚಕ್ರವರ್ತಿ ಸೂಲಿಬೆಲೆಯವರ ಮೇಲೆ ಖಾರದ ಪುಡಿ ಹಾಕುವುದಾಗಿ ರಾಜಾರೋಷವಾಗಿಯೇ ತನ್ನ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾನೆ.

ಈತನ ಈ ಅಸಹ್ಯದ ವರ್ತನೆಗಳನ್ನು ಕಂಡು ನೆಟ್ಟಿಗರು ಆತನನ್ನು ಪ್ರಶ್ನಿಸಿದ ಕಾರಣ ಪೋಸ್ಟ್ ಡಿಲಿಟ್ ಮಾಡಿಕೊಂಡು, ಪ್ರೊಫೈಲ್ ಅನ್ನು ಲಾಕ್ ಕೂಡ ಮಾಡಿಕೊಂಡಿದ್ದಾನೆ. ಕರ್ನಾಟಕ ಸರ್ಕಾರದ ಸಚಿವರೊಬ್ಬರ ಮಾಧ್ಯಮ ಸಂಯೋಜಕನ ಭಾಷೆ ಇಂಥದ್ದೇ ಎಂದು ಜನ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈತನಿಗೆ ಜನರ ತೆರಿಗೆ ಹಣದಲ್ಲಿ ವೇತನವನ್ನೂ‌ ಮತ್ತು ಭತ್ಯೆಯನ್ನೂ ನೀಡುತ್ತಿದೆ. ಜನ ತಮ್ಮ ಹಣ ಇಷ್ಟು ಕೋಮುದ್ವೇಷ ಮನಸ್ಸಿನಲ್ಲಿ ತುಂಬಿರುವ ವ್ಯಕ್ತಿಗೆ ಪೋಲಾಗುತ್ತಿದೆಯಲ್ಲ ಎಂಬ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದಾರೆ. ತನ್ನ ಕೈಯಲ್ಲೇ ಅಧಿಕಾರವಿದೆ ಎಂಬಂತೆ ವರ್ತಿಸುತ್ತಾ, ಮತ್ತೊಬ್ಬರ ಬಗ್ಗೆ ಅತ್ಯಂತ ಕೀಳಾಗಿ ಪೋಸ್ಟ್ ಹಾಕುವ ಈತನ ಮೇಲೆ ಪೊಲೀಸರು ಕ್ರಮ ಜರುಗಿಸುತ್ತಾರಾ? ಮಾಧ್ಯಮ ಸಂಯೋಜಕನಾಗಿ ನೇಮಿಸಿಕೊಂಡಿದ್ದ ಡಾ. ಹೆಚ್.ಸಿ‌ ಮಹದೇವಪ್ಪನವರು ಈತನ ಬಾಯನ್ನು ಬಿಗಿಮಾಡುವ, ಭಾಷೆ ಸುಧಾರಿಸಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಾರಾ?

RELATED ARTICLES  ದಿನಾಂಕ 20/05/2019 ರ ದಿನ ಭವಿಷ್ಯ ಇಲ್ಲಿದೆ ನೋಡಿ.

ಅದೂ ಅಲ್ಲದೇ, ಒಂದು ಕೋಮಿನ ವಿರುದ್ಧ ದ್ವೇಷ ಸಾಧಿಸುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುವುದು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈಗ ತಮ್ಮದೇ ಸಚಿವರ ಮಾಧ್ಯಮ ಸಂಯೋಜಕನ ಮೇಲೆ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ ಅಷ್ಟೆ.

ಸಾಮಾಜಿಕ ಜಾಲತಾಣಿಗರ ಪ್ರಶ್ನೆ.