ಹೊನ್ನಾವರ : ತಾಲೂಕಿನ ಮಂಕಿ ಅನಂತವಾಡಿ ಅಣ್ಣೆಬೀಳು ನಿವಾಸಿ ಮಂಜಯ್ಯ ಬಾಲಯ್ಯ ನಾಯ್ಕ ಅಪ್ಸರಕೊಂಡದಲ್ಲಿ ಗೇರುಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಇವರು ಮಂಕಿಯಿಂದ ಕಳಸಿನಮೋಟೆಯಲ್ಲಿರುವ ತನ್ನ ಮಗಳ ಮನೆಗೆ ಹೋಗಿ, ವಾಪಾಸ್ ಮನೆಗೆ ಹೋಗಲು ಕೆಳಗಿನೂರು ಸೊಸೈಟಿ ಹತ್ತಿರ ಬಸ್ಸಿಗೆ ಕಾಯುತ್ತಿದ್ದವರು ಮನೆಗೆ ಬಂದಿಲ್ಲ ಎಂದು ಸುರೇಶ ರಾಮ ನಾಯ್ಕ ಮಂಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ನಾಪತ್ತೆ ಆದ ವ್ಯಕ್ತಿ ಅಪ್ಸರಕೊಂಡ ಹತ್ತಿರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೃತರ ಮರಣೊತ್ತರ ಪರೀಕ್ಷೆಯ ಬಳಿಕ ಶವ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.