ಕುಮಟಾ : ಪಟ್ಟಣದ ಸುಖಸಾಗರ ಹೋಟೆಲ್ ಕೆಲಸಕ್ಕೆ ಸೇರಿದ್ದ ಆರೋಪಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಸುಬ್ರಹ್ಮಣ್ಯ ತನ್ನ ಜೊತಗೆ ಕೆಲಸ ಮಾಡುವ ಇನ್ನೋರ್ವ ಕೆಲಸಗಾರನ ಮೇಲೆ ಹಲ್ಲೆ ನಡೆಸಿ ಆತನಿಂದ ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾದ ಪ್ರಕರಣವನ್ನು ಕುಮಟಾ ಪೊಲೀಸರು ೨೪ ಗಂಟೆಯೊಳಗಾಗಿ ಬೇಧಿಸಿ
ಆರೋಪಿಯನ್ನು ಬಂಧಿಸಿದ್ದಾರೆ.

ತಾಲೂಕಿನ ಹೆಗಡೆಯ ಶಿವಪುರ ನಿವಾಸಿ ಕೃಷ್ಣ ಮಂಜಯ್ಯ ಶೆಟ್ಟಿ ಮಲಗಿರುವಾಗ ಹಣ ಮತ್ತು ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿಕೊಂಡು ಹೋಗುವ ಉದ್ದೇಶದಿಂದ ತಲೆಯ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿ, ಕಿಸೆಯಲ್ಲಿ ಇದ್ದ ಸುಮಾರು ೪೫೦೦/- ರೂ ನಗದು ಹಣವನ್ನು ಕಿತ್ತುಕೊಂಡಿದ್ದಲ್ಲದೇ ಹಾಸಿಗೆ ಮೇಲೆ ಇದ್ದ ಕೃಷ್ಣ ಶೆಟ್ಟಿಯ ೨ ಮೊಬೈಲ್ ಪೋನ್ ಗಳನ್ನು ಕಿತ್ತುಕೊಂಡು ರಾತ್ರೋರಾತ್ರಿ ಹೋಟೆಲ್‌ನಿಂದ ಪರಾರಿಯಾಗಿದ್ದ ಸುಬ್ರಹ್ಮಣ್ಯ ನ ಮೇಲೆ ದೂರು ದಾಖಲಾಗಿತ್ತು.

RELATED ARTICLES  ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ.

ಈ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಎಡಿಶನಲ್ ಎಸ್.ಪಿ ಸಿ.ಟಿ ಜಯಕುಮಾರ, ಡಿ.ಎಸ್.ಪಿ ಶ್ರೀಕಾಂತ ಕೆ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ರವರ ಸಹಕಾರದಲ್ಲಿ ಪ್ರಕರಣದ ತನಿಖೆಯನ್ನು ಕೈಗೊಂಡ ಪಿ.ಎಸ್.ಐ ನವೀನ ನಾಯ್ಕ, ಪದ್ಮಾ ದೇವಳರವರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ, ಶಿವಾನಂದ ಜಾಡರ್ ಭಾಗವಹಿಸಿದ್ದರು.

RELATED ARTICLES  ಮದುವೆ ನೋಡಲೆಂದು ಹೋಗಿ ಮದುವೆ ಮಾಡಿಕೊಂಡಳು…ಕಾರಣ ಗೊತ್ತಾದರೆ…ಶಾಕ್!!