ಚಂದಿರನ ಅಂತರಾಳವನ್ನು ಅರಿಯುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮೂರನೇ ಪ್ರಯತ್ನ `ಚಂದ್ರಯಾನ-3′ ಬಗ್ಗೆ ವಿಶ್ವದೆಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.ಭಾರತೀಯ ಇಂಜಿನಿಯರ್‌ಗಳ ಮಹತ್ವಾಕಾಂಕ್ಷಿ ಯೋಜನೆಗೆ ದೇಶದ ಜನ ಶಹಭಾಷ್ ಎನ್ನುತ್ತಿದ್ದಾರೆ. ಈ ತಂಡದಲ್ಲಿ ಉತ್ತರ ಕನ್ನಡದವರೊಬ್ಬರ ಕೊಡುಗೆಯೂ ಇದೆ ಎಂಬುದೇ ಹೆಮ್ಮೆಯ ಸಂಗತಿ.
ಮುರ್ಡೇಶ್ವರ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಆಕಾಶ ಶೆಟ್ಟಿ ಎಂಬುವವರು ಇಸ್ರೋ ಚಂದ್ರಯಾನ-3 ರ ಸ್ಪೇಸ್‌ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್‌ನಲ್ಲಿ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ, ಯೋಜನೆಯ ಯಶಸ್ವಿಗೆ ತಮ್ಮ ಕೊಡುಗೆ ನೀಡಿದ್ದಾರೆ.
ಚಂದ್ರನ ಮೇಲೆ ಇಳಿಯಲಿರುವ ಲ್ಯಾಂಡರ್‌ನ ಲೆಗ್‌ಗಳ ಜೋಡಣೆ ಹಾಗೂ ಪರಿಶೀಲನೆ, ಚಂದ್ರನ ಮೇಲೆ ಇಳಿಯಲು ರೋವರ್ ರ‍್ಯಾಂಪ್ ಅಭಿವೃದ್ಧಿ, ಹಾಗೂ ಐಎಲ್‌ಎಸ್‌ಎ ಪ್ಲೋಲೋಡ್ ಬಿಡುಗಡೆ ವಿಭಾಗವನ್ನು ಆಕಾಶ ಅವರ ನೇತೃತ್ವದ ಐವರು ಇಂಜಿನಿಯರ್‌ಗಳು ಹಾಗೂ ಐವರು ಸಹಾಯಕರ ತಂಡ ನೋಡಿಕೊಂಡಿದೆ.
ಉತ್ತರ ಕನ್ನಡ ದ ಹೆಮ್ಮೆಯ ಪುತ್ರ ಆಕಾಶ್ ಶೆಟ್ಟಿ ಯವರು ಪ್ರಪಂಚವೇ ನಿಬ್ಬೆರಗಾಗುವ ಚಂದ್ರಯಾನ-3 ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಿರುವುದು ಹೆಮ್ಮೆಯ ಸಂಗತಿ… ಅವರಿಗೆ ಅಭಿನಂದನೆಗಳು ಅವರು ಇನ್ನೂ ಹೆಚ್ಚಿನ ಯಶಸ್ಸು ಸಾಧಿಸುವಂತಾಗಲಿ.