ಶಿರಸಿ: ಇಲ್ಲಿನ ತಹಶಿಲ್ದಾರರ ಕಚೇರಿಯ ಕಂದಾಯ ಅಧಿಕಾರಿ ವಿನಾಯಕ ಭಟ್ಟ ಮಿನಿ ವಿಧಾನಸೌಧದ ಮುಂದೆ ತಮ್ಮ ಕಾರಿನಲ್ಲಿ ಕುಳಿತಂತೆಯೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದಾಗಿ ಮೃತಪಟ್ಟಿರುವ ಇವರ ಸಾವಿಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಶಿರಸಿ ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಕಂದಾಯ ನಿರೀಕ್ಷಕ ವಿನಾಯಕ ಭಟ್ ಅವರು ಹೃದಾಯಾಘಾತದಿಂದ ಕಚೇರಿಯ ಆವರಣದಲ್ಲಿದ್ದ ತನ್ನ ಕಾರಿನಲ್ಲಿಯೇ ಸಾವು ಕಂಡಿದ್ದು ಈ ವಿಷಯ ನೋವಿನ ಸಂಗತಿಯಾಗಿದೆ. ಸಣ್ಣ ವಯಸ್ಸಿನಲ್ಲೆ ಈ ರೀತಿಯ ದುರ್ಮರಣದಿಂದ ಉತ್ತಮ ಸರಕಾರಿ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ ಹಾಗೂ ಅವರ ಸಹೋದ್ಯೋಗಿ ಬಂಧುಗಳಿಗೆ ದುಖಃ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇನೆ. – ಭೀಮಣ್ಣ ನಾಯ್ಕ ಶಾಸಕರು ಶಿರಸಿ.