ಕುಮಟಾ : ತಾಲೂಕಿನ ಅಳಕೋಡ್ ಗ್ರಾಮ ಪಂಚಾಯತ್ ಸಂಡಳ್ಳಿ, ಮತ್ತಳ್ಳಿಯಲ್ಲಿ ಸೋಮವಾರ ರಾತ್ರಿ 9.30ರ ಸರಿಸುಮಾರಿಗೆ ಸುರಿದ ಬಾರಿ ಗಾಳಿ ಮಳೆಯಿಂದಾಗಿ ಚಂದ್ರಕಾಂತ ಪಟಗಾರ ಎಂಬುವವರ ಮನೆ ಮೇಲೆ ಮರ ಬಿದ್ದು ಅವಘಡ ಸಂಭವಿಸಿದೆ.
ಒಮ್ಮೆಲೇ ಮನೆಯ ಮೇಲೆ ಎರಗಿದ ಮರ ಮನೆಯ ಸಿಮೆಂಟ್ ತಗಡುಗಳನ್ನು ಸಂಪೂರ್ಣ ಜಖಂ ಮಾಡಿದೆ. ಜೊತೆಗೆ ಮಳೆಯಿಂದಾಗಿ ಮನೆಯೊಳಗೆ ನೀರು ತುಂಬಿ ಮನೆಯ ಸಾಮಾನು ಸರಂಜಾಮುಗಳು ಒದ್ದೆಯಾದವು. ಮನೆಯ ಸದಸ್ಯರುಗಳು ಅಲ್ಲಿಯೇ ಇದ್ದರಾದರೂ ಅದೃಷ್ವಷಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಹಾನಿಯಾಗಿದ್ದು ತುರ್ತಾಗಿ ವಾಸ ಮಾಡಲು ಕಷ್ಟವಾಗಿದೆ.
ಘಟನೆ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಧಾವಿಸಿದ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಗಜಾನನ ಪೈ ರವರು ಅಲ್ಲಿನ ವಸ್ತುಸ್ಥಿತಿ ಗಮನಿಸಿ ಕುಟುಂಬದವರ ಜೊತೆಗೆ ಮಾತುಕತೆ ನಡೆಸಿದರು.
ಶಾಸಕರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಗಜಾನನ ಪೈ ಭರವಸೆ ನೀಡಿದರು. ಈ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದೇವು ಗೌಡ, ಗ್ರಾಮ ಪಂಚಾಯತ್ ಅಭಿವೃಧಿ ಅಧಿಕಾರಿಗಳು, ಗ್ರಾಮ ಲೆಕ್ಕಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.