ಕುಮಟಾ : ಸಮಾಜಕ್ಕೆ ಉಪಯುಕ್ತವಾಗುವಂತಹ ಹಲವು ಹಲವು ವಿದಾಯಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ತಾಲೂಕಿನ ವಿವೇಕ ನಗರ ವಿಕಾಸ ಸಂಘದ ಆಶ್ರಯದಲ್ಲಿ ವಿವೇಕಾನಂದ ಉಪವನದಲ್ಲಿ ಇತ್ತೀಚಿಗೆ ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಅರಣ್ಯ ಇಲಾಖೆಯಿಂದ ಪೂರೈಸಿರುವ
ಸಂಪಿಗೆ, ಕದಂಬ, ಹಲಸು, ನೆಲ್ಲಿ, ಇತ್ಯಾದಿ ಗಿಡಗಳನ್ನು ಗಾರ್ಡನ್ನಿನ ಸೌಂದರ್ಯ ಹೆಚ್ಚಿಸುವ ರೀತಿಯಲ್ಲಿ ಯೋಜನಾಪೂರ್ವಕ ವಾಗಿ ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವೇಕ ನಗರ ವಿಕಾಸ ಸಂಘದ ಅಧ್ಯಕ್ಷರಾದ ಎಂ‌.ಆರ್.ನಾಯಕ್ ರವರು ಆಗಮಿಸಿದ ಎಲ್ಲರನ್ನು ಸ್ವಾಗತಿಸುತ್ತಾ ಗಿಡವೆಂದರೆ ಕೇವಲ ಕಣ್ಣಿಗೆ ಆನಂದ ನೀಡುವ ಹಸಿರಷ್ಟೇ ಅಲ್ಲ, ನಮ್ಮ ಉಸಿರು ಕೂಡ. ಗಿಡಗಳನ್ನು ನೆಟ್ಟು, ಉಳಿಸಿ ಬೆಳೆಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಹವಾಮಾನ ವೈಪರೀತ್ಯಗಳನ್ನು ತಡೆಯುವುದಕ್ಕೆ ಗಿಡ ನೆಡುವುದೊಂದೇ ದಾರಿ. ಈ ಜಾಗೃತಿ ಮನೆ ಮನೆಯಲ್ಲಿ ಆಗಬೇಕು ಎಂದರು.

RELATED ARTICLES  ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಕಾರ್ಯದರ್ಶಿ ಡಾ .ದಯಾನಂದ ಭಟ್ಟ, ಕೋಶಾಧಿಕಾರಿ ವಿಷ್ಣು ಹೊಸಕಟ್ಟಾ ಸಂಘದ ನಿರ್ದೇಶಕರುಗಳಾದ ಆರ್. ಎನ್. ಪಟಗಾರ, ಅರುಣ ಹೆಗಡೆ, ಸಂಜಯ್ ಪಂಡಿತ್, ಸೀತಾರಾಮ ಗುನಗ, ತಿಮ್ಮಪ್ಪ ಮುಕ್ರಿ. ಶ್ರೀ ಕೆ, ಎಸ್, ಭಟ್, ಗಣೇಶ್ ಪಟಗಾರ, ಮೋಹನ್ ಗುನಗ, ಮಹಾಬಲೇಶ್ವರ ಶೇಟ್, ಕುಮಾರ್ ಕೌರಿ, ಜೆ.ಜಿ. ನಾಯ್ಕ, ವಿಶ್ರಾಂತ ಪ್ರಾಧ್ಯಾಪಕರಾದ ಆರ್. ಎ .ಪ್ರಭು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES  ಸತತ ೫ ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಧರ ಭಾಗ್ವತ್.