ಜೋಯಿಡಾ :ತಾಲೂಕಿನ ಫಣಸೋಲಿ ಅರಣ್ಯ ವ್ಯಾಪ್ತಿಯಲ್ಲಿ ಉರುಳು ಹಾಕಿ ಜಿಂಕೆಯೊಂದನ್ನು ಸಾಯಿಸಿ ಮಾಂಸ ಮತ್ತು ಚರ್ಮ ಬೇರ್ಪಡಿಸುವ ಸಂದರ್ಭದಲ್ಲಿ ಫಣಸೋಲಿ ಅರಣ್ಯಾಧಿಕಾರಿಗಳು ಮೂರು ಆರೋಪಿಗಳನ್ನು ಬಂಧಿಸಿದ್ದು, ನಾಲ್ಕು ಜನರು ಪರಾರಿಯಾದ ಘಟನೆ ನಡೆದಿದೆ.
ಫಣಸೋಲಿ ಅರಣ್ಯ ಇಲಾಖೆ ವ್ಯಾಪ್ತಿಯ ವಿರ್ನೋಲಿ ಅರಣ್ಯ ಸಂಖ್ಯೆ 48 ರಲ್ಲಿ ಉರುಳು ಹಾಕಿ ಗಂಡು ಜಿಂಕೆಯೊಂದನ್ನು ಸಾಯಿಸಿ ತಲೆ ,ಚರ್ಮ, ಮಾಂಸ ಬೇರ್ಪಡಿಸುತ್ತಿದ್ದ ಸಮಯದಲ್ಲಿ ಫಣಸೋಲಿ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ಕೃಷ್ಣ ವಿಷ್ಣು ಕಲ್ಲೋಲಕರ(32), ಮಂಜುನಾಥ ವಿಷ್ಣು ಕಲ್ಲೋಲಕರ( 26 ), ಉಮಾಕಾಂತ ಧರಣಿ (32), ಉಮೇಶ
ನಾರಾಯಣ ಧರಣಿ (55) ನಾಪತ್ತೆಯಾಗಿದ್ದು, ವಿಷ್ಣು ಕೃಷ್ಣ ಕಮ್ಮೋಕರ (62) ಕೇಶವ ಹರಿಜನ (80) ಸುರೇಶ ಅಂಬು ಮುಂದಾಯಕರ (58) ಬಂಧಿಸಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
25.72 kg ತಲೆ ಮತ್ತು ಮಾಂಸ ,11 kg ಚರ್ಮ ಮತ್ತು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ ,ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಎ.ಸಿ.ಎಪ್ ಅಮರಾಕ್ಷರ ಎಮ್ ರವರ ಮಾರ್ಗದರ್ಶನದಲ್ಲಿ ಫಣಸೋಲಿ
ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ, ಸಿಬ್ಬಂದಿಗಳಾದ ಅಣ್ಣಪ್ಪ ಮುದಕಣ್ಣವರ್ ಶೇಖರ್ ಪಮ್ಮಾರ, ಪರಮೇಶ್ವರ ಪಾಟೀಲ್, ಹೈದರ್ ಅಲಿ ಮತ್ತು ಕಾವಲುಗಾರರು ವಾಹನ ಚಾಲಕರು ಇದ್ದರು.