ಹೊನ್ನಾವರ : ಶಿರಸಿ, ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ಹೊನ್ನಾವರ ತಾಲೂಕಿನ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಮತ್ತು ರಿಕ್ಷಾ ಪಾಸಿಂಗ್ ಯೋಜನೆಯ ಬೃಹತ್ ಕಾರ್ಯಕ್ರಮವನ್ನು ಇದೇ ಭಾನುವಾರ ದಿನಾಂಕ 23/07/2023 ರ ಬೆಳಿಗ್ಗೆ 10 ಗಂಟೆಗೆ ಹೊನ್ನಾವರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ರಿಕ್ಷಾ ಚಾಲಕ, ಮಾಲಕ ಸಹೋದರರು ಭಾಗವಹಿಸಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಕುಟುಂಬದ ಸದಸ್ಯರಾಗುವಂತೆ ಸಂಘಟಕರು ವಿನಂತಿಸಿದ್ದಾರೆ.

RELATED ARTICLES  ಕುಮಟಾ ಬ್ಲಡ್ ಬ್ಯಾಂಕ್ ನಲ್ಲಿ ಇಂದು ಲಭ್ಯವಿರುವ ರಕ್ತದ ವರ್ಗಗಳ ಮಾಹಿತಿ.
IMG 20230720 WA0001

ಜನರ ಕಷ್ಟಕ್ಕೆ ಸ್ಪಂದಿಸುವ ನೀವು ಕಷ್ಟದ ಪರಿಸ್ಥಿತಿಯಲ್ಲಿದ್ದೀರಿ ಎಂಬುದು ನಮ್ಮ ಟ್ರಸ್ಟ್ನ ಗಮನಕ್ಕೆ ಬಂದಿದೆ. ಹೀಗಾಗಿ ನಿಮಗಾಗಿ, ನಿಮ್ಮ ಕುಟುಂಬದವರಿಗಾಗಿ ಪ್ರೀತಿಯ ಔತಣಕೂಟ, ಸಮವಸ್ತ್ರವಿತರಣೆ, ಹಾಗು ಸ್ಪಲ್ಪದಿನ ಮಟ್ಟಿಗೆ ಉಚಿತ ಪಾಸಿಂಗ್ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಹಾಗೆಯೇ ಉನ್ನತ ಶಿಕ್ಷಣ ತರಬೇತಿ, ಸಹಾಯಧನ, ವೈದ್ಯಕೀಯ ಸಹಾಯ ಹೀಗೆ ಇನ್ನಷ್ಟು ಯೋಜನೆಯನ್ನು ಅನುಷ್ಠಾನಗೊಳಿಸುವ ಯೋಜನೆ ಇದೆ. ನೀವು ನಮ್ಮ ಕುಟುಂಬದ ಸದಸ್ಯರಾಗಿ, ನಮ್ಮ ಆತಿಥ್ಯ ಸ್ವೀಕರಿಸಿ ಎಂದು ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ ವಿನಂತಿಸಿದೆ.

RELATED ARTICLES  ಕರ್ನಾಟಕದಾದ್ಯಂತ ನಿಷೇಧಾಜ್ಞೆ : ಸಾರ್ವಜನಿಕರಿಗೆ ಪೊಲೀಸ್ ಪ್ರಕಟಣೆ.

ಮಾಹಿತಿಗಾಗಿ – ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಟ್ರಸ್ಟ್ – 9448317709