ಕುಮಟಾ : ಬ್ಯಾಂಕ್ ಉದ್ಯೋಗಿ ಒಬ್ಬರು ಸಾಲ ವಸೂಲಿಗೆ ತೆರಳಿ ಬ್ಯಾಂಕ್ ಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾದಿಂದ. ಮೃತಪಟ್ಟಿರುವ ಘಟನೆ ಬರ್ಗಿಯಲ್ಲಿ ಗುರುವಾರ ನಡೆದಿದೆ.
ಪ್ರಕಾಶ ಅರವಣಕರ್ (40) ಮೃತ ಬ್ಯಾಂಕ್ ನೌಕರರಾಗಿದ್ದರು. ಇವರು ಕುಮಟಾ ತಾಲೂಕಿನ ಅಳ್ವೇಕೋಡಿ ನಿವಾಸಿಯಾಗಿದ್ದು, ಬರ್ಗಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿದ್ದರು.
ಅವರು ಇಂದು ಬೆಳಿಗ್ಗೆ ಎಂದಿನಂತೆ ಮನೆಯಿಂದ ಕಚೇರಿಗೆ ಬರುತ್ತಿರುವಾಗ ಒಂದೆ ಸಮನೆ ಎದೆ ನೋವು ಕಾಣಿಸಿಕೊಂಡಿದೆ. ಇನ್ನೇನು ಕಚೇರಿಗೆ ತಲುಪ ಬೇಕು ಎನ್ನುವಷ್ಟರಲ್ಲಿ ಎದೆ ನೋವು ಮತ್ತಷ್ಟು ಜಾಸ್ತಿ ಆಗಿದೆ. ತಕ್ಷಣ ಅವರನ್ನ ಖಾಸಗಿ ವಾಹನವೊಂದರಲ್ಲಿ ಕುಮಟಾ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋಗುತ್ತಿರುವಾಗಲೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.