ಸಿದ್ದಾಪುರ :ಹಾಳದಕಟ್ಟಾದ ಸಮೀಪದ ಹಣಜಿಬೈಲ್ ಕ್ರಾಸ್ ನಲ್ಲಿ ಮನೆ ಕಂಪೌಂಡ್ ನ ಒಳಗಡೆ ಬೆಳೆಸಿದ್ದ ಗಂಧದ ಮರವನ್ನು ಕಳ್ಳತನ ಮಾಡಿಕೊಂಡು ಬೈಕ್ ನಲ್ಲಿ ಕಟ್ಟಿಕೊಂಡು
ಸಾಗಾಟ ಮಾಡುತ್ತಿರುವಾಗ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಹನುಮಂತ ದ್ಯಾವ ನಾಯ್ಕ ಹಸುವಂತೆ ಎನ್ನುವ ವ್ಯಕ್ತಿಯು ಬೈಕ್ ನಲ್ಲಿ ಗಂಧದ ತುಂಡುಗಳನ್ನು ಕಟ್ಟಿಕೊಂಡು ಕೊಂಡಿ ಕಡೆಯಿಂದ ಹಸುವಂತೆ ಕಡೆಗೆ ಸಾಗಾಟ ಮಾಡುತ್ತಿರುವ ಸಮಯದಲ್ಲಿ ಪೊಲೀಸರು ದಾಳಿ ಮಾಡಿ ಗರಗಸ, ಕತ್ತಿ, ಗಂಧದ ತುಂಡು 31 ಕೆಜಿ, ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 31 ಕೆಜಿ ಗಂಧದ ತುಂಡುಗಳ ಮೌಲ್ಯ ಸುಮಾರು 1.25 ರೂ. ಈ ಕುರಿತಾಗಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.